Cnewstv / 17.02.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬಡ, ಸಣ್ಣ ಹಾಗೂ ಅತಿ ಸಣ್ಣ, ಬಗರ್ ಹುಕುಮ್ ಸಾಗುವಳಿ ದಾರರಿಗೆ ಭೂಮಿ ಮಂಜೂರು ಮಾಡಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮನವಿ.
ಬೆಂಗಳೂರು : ಮಲೆನಾಡು ಪ್ರದೇಶದಲ್ಲಿ, ಕಾಣೆ, ಬಾಣೆ, ಸೊಪ್ಪಿನ ಬೆಟ್ಟ, ಹುಲ್ಲುಬನ್ನಿ ಹಾಗೂ ಸರ್ಕಾರಿ ಬೀಳು, ಒಳಗೊಂಡಂತೆ, ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ, ಸಾವಿರಾರು, ಬಡವರು ಹಾಗೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ, ಬಗರ್ ಹುಕುಂ ಜಮೀನನ್ನು, ಮಂಜೂರು ಮಾಡಲು, ನಾಳಿನ ಬಜೆಟ್ ನಲ್ಲಿ, ಘೋಷಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ವಿನಂತಿಸಿದ್ದಾರೆ.
ಇದನ್ನು ಒದಿ : https://cnewstv.in/?p=12110
ಸಚಿವರು ಇಂದು, ಮುಖ್ಯ ಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ, ಬಹು ದಿನಗಳ ಕಾಲದ ಈ ಬೇಡಿಕೆಯನ್ನು ಮನ್ನಿಸಿ, ಸಾವಿರಾರು ಬಡ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಬಗ್ಗೆ ಹೊಂದಿರುವ ಕನಸನ್ನು ನನಸು ಮಾಡಲು, ಮನವಿ ಮಾಡಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv