Cnewstv / 15.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮರೆಯದ ಮಾಣಿಕ್ಯ..
ಶಿವಮೊಗ್ಗ : ಸಿ.ಭೀಮಸೇನರಾವ್ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ನೆಚ್ಚಿನ ಪ್ರಾಂಶುಪಾಲರಾಗಿದ್ದ ಪ್ರೊ. ಜಿ.ಆರ್. ಜಗದೀಶ್ (60) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧುಗಳು, ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳನ್ನು ಅಗಲಿದ್ದಾರೆ.
ಜಗದೀಶ್ ಅವರು ಮೈಸೂರು ವಿವಿಯಲ್ಲಿ ಕಾನೂನು ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲಕಾಲ ವಕೀಲರಾಗಿ ಕಾರ್ಯ ನಿರ್ವಹಿಸಿದ ಇವರು, ಶಿವಮೊಗ್ಗದ ಸಿಬಿಆರ್ ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರದಲ್ಲಿ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡು ಇಲ್ಲಿಯವರೆಗೂ ಪ್ರಾಂಶುಪಾಲರ ಹುದ್ದೆಯಲ್ಲೇ ಮುಂದುವರೆದಿದ್ದರು.
ಯಾವುದೇ ಸಂದರ್ಭದಲ್ಲಿಯೂ ತಾಳ್ಮೆ, ಸಂಯಮದಿಂದ ವರ್ತಿಸುತ್ತಿದ್ದ ಇವರು ಎಂತಹ ವಿಷಯಗಳಲ್ಲಿಯೂ ಕರಾರುವಕ್ಕಾಗಿ ಇರುತ್ತಿದ್ದರು. ವಿಶೇಷವಾಗಿ ಭಾರತೀಯ ಸಂವಿಧಾನದ ವಿಷಯದಲ್ಲಿ ಹಿಡಿತ ಸಾಧಿಸಿದ್ದ ಇವರು ಕಾಲೇಜಿನ ವಿದ್ಯಾರ್ಥಿಗಳಿಗೆ ನೆಚ್ಚಿನ ಅಧ್ಯಾಪಕಾಗಿದ್ದರು. ಕುವೆಂಪು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಸೆನೆಟ್ ಸಿಂಡಿಕೇಟ್ ಸದಸ್ಯರಾಗಿ ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಕೆಲಕಾಲ ಕರ್ನಾಟಕ ಕಾನೂನು ವಿಶ್ವವಿದ್ಯಾನಿಯಲದ ಪ್ರಭಾರಿ ಉಪಕುಲಪತಿಗಳಾಗಿ ಕಾರ್ಯ ನಿರ್ವಹಿಸಿ ಎಲ್ಲರಿಂದಲೂ ಪ್ರಶಂಸೆಗೊಳಗಾಗಿದ್ದರು.
ಇದನ್ನು ಒದಿ : https://cnewstv.in/?p=12086
ಫೆಬ್ರವರಿ 28ರಂದು ವೃತ್ತಿಜೀವನದಿಂದ ನಿವೃತ್ತರಾಗುತ್ತಿದ್ದ ಪ್ರೊ. ಜಿ.ಆರ್. ಜಗದೀಶ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ವಿದ್ಯಾರ್ಥಿಗಳು, ಎನ್‌ಇಎಸ್‌ನÀ ಬೋಧಕ-ಬೋಧಕೇತರ ವರ್ಗದವರೊಂದಿಗೆ ಆಚರಿಸಿಕೊಂಡಿದ್ದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸುವ ಇಂಗಿತ ವ್ಯಕ್ತಪಡಿಸಿದ್ದರು.
ಪ್ರೊ. ಜಿ.ಆರ್. ಜಗದೀಶ್ ಅವರ ನಿಧನಕ್ಕೆ ಜಿಲ್ಲಾ ವಕೀಲರ ಸಂಘ, ಎನ್.ಇ.ಎಸ್. ಆಡಳಿತ ಮಂಡಳಿ, ಸ್ನಾತಕೋತ್ತರ ಪದವೀಧರರ ಸಹಕಾರ ಸಂಘ, ಎನ್‌ಇಎಸ್ ನೌಕರರ ಸಂಘ, ಭಾರತೀಯ ಸಣ್ಣ ಮತ್ತು ಪತ್ರಿಕೆಗಳ ಒಕ್ಕೂಟ, ವಿದ್ಯಾರ್ಥಿಗಳು ಸಂತಾಪ ಸೂಚಿಸಿದ್ದಾರೆ.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
C News TV Kannada News Online in cnewstv