Breaking News

ಲೈಸನ್ಸ್ ನವೀಕರಣಕ್ಕೆ ಸೂಚನೆ.

Cnewstv / 1.02.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲೈಸನ್ಸ್ ನವೀಕರಣಕ್ಕೆ ಸೂಚನೆ.

ಶಿವಮೊಗ್ಗ : 2013 ರಿಂದ 2023 ನೇ ಸಾಲಿಗೆ ಲೈಸನ್ಸ್ ಪಡೆದ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರ ಪರವಾನಿಗೆ ಅವಧಿಯು 2023 ರ ಮಾರ್ಚ್ 31 ರಂದು ಮುಕ್ತಾಯಗೊಳ್ಳಲ್ಲಿದ್ದು, ಲೈಸನ್ಸ್ ನವೀಕರಿಸಲು ಇಚ್ಛಿಸುವ ಪೇಟೆ ಕಾರ್ಯಕರ್ತರು ಫೆ.28 ರ ಒಳಗಾಗಿ ನಿಗದಿತ ಲೈಸನ್ಸ್ ಫಾರಂನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸತಕ್ಕದ್ದು.

ಇದನ್ನು ಒದಿ : https://cnewstv.in/?p=11976

ಫೆ.28 ರ ನಂತರ ಲೈಸೆನ್ಸ್‍ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದಕಾರಣ ಲೈಸನ್ಸ್ ನವೀಕರಣಗೊಳಿಸಿಕೊಳ್ಳುವುದರಿಂದ ಹೊರಗುಳಿದರೆ ಮುಂದಿನ ಕಾನೂನಾತ್ಮಕ ಪರಿಣಾಮಗಳಿಗೆ ತಾವೇ ನೇರ ಹೊಣೆಗಾರರಾಗಿರುತ್ತೀರಿ ಎಂದು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ತಿಳಿಸಿರುತ್ತಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*