Breaking News

ಸಿದ್ದರಾಮಯ್ಯ ಅವರ ಹೆಣವನ್ನು ನಾಯಿಯೂ ಮೂಸುವುದಿಲ್ಲ.

Cnewstv / 31.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಿದ್ದರಾಮಯ್ಯ ಅವರ ಹೆಣವನ್ನು ನಾಯಿಯೂ ಮೂಸುವುದಿಲ್ಲ.

ಶಿವಮೊಗ್ಗ: ಸಿದ್ದರಾಮಯ್ಯ ಅವರ ಹೆಣವನ್ನು ನಾಯಿಯೂ ಮೂಸುವುದಿಲ್ಲ. ಜೀವಂತವಾಗಿರುವಾಗಲೇ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಇನ್ನು ಅವರ ಹೆಣವನ್ನು ನಾವೇಕೆ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

ಇದನ್ನು ಒದಿ : https://cnewstv.in/?p=11957

ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ನನ್ನ ಹೆಣ ಕೂಡ ಬಿಜೆಪಿಯನ್ನು ಸೇರುವುದಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಅವರನ್ನು ನಾವು ಜೀವಂತವಾಗಿದ್ದಾಗಲೇ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಅವರೇ ಹೇಳಿದಂತೆ ಅವರ ಹೆಣವನ್ನೇಕೆ ನಾವು ಸೇರಿಸಿಕೊಳ್ಳುತ್ತೇವೆ. ಅವರ ಹೆಣವನ್ನು ನಾಯಿಯೂ ಮೂಸಲ್ಲ. ಹತಾಶರಾಗಿರುವ ಅವರು ಇನ್ನೂ ಏನೇನು ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಬಫೂನ್ ಎಂದು ಕರೆದಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಹೇಳುವುದರಿಂದ ಅವರ ಯೋಗ್ಯತೆ ಅರ್ಥವಾಗುತ್ತದೆ. ಇದು ಅವರಿಗೆ ಶೋಭೆ ತರುವುದಿಲ್ಲ. ನಮಗೂ ಮಾತನಾಡಲು ಬರುತ್ತದೆ. ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯ ಇದೇರೀತಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದ ಎಚ್ಚರಿಸಿದರು.

ಸಿದ್ದರಾಮಯ್ಯ ಅವರ ಹಣೆಬರಹ ಮತದಾರರಿಗೆ ಗೊತ್ತು. ಈತ ನಂಬಿಕಸ್ಥ ಮನುಷ್ಯ ಅಲ್ಲ. ಚುನಾವಣೆಯಲ್ಲಿ ಜನರು ತಮ್ಮನ್ನು ಸೋಲಿಸುತ್ತಾರೆ ಎಂಬ ಕಾರಣಕ್ಕೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುತ್ತಿದ್ದಾರೆ ಎಂದ ಅವರು, ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆ ವಿಷಯದ ಬಗ್ಗೆ ರಾಷ್ಟಿçÃಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ನಳಿನ್‌ಕುಮಾರ್ ಕಟೀಲ್ ಅವರು ಕಾಲಲ್ಲಿ ಚಕ್ರ ಹಾಕಿಕೊಂಡು ರಾಜ್ಯವನ್ನು ಸುತ್ತುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*