Breaking News

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟು. ಹೆದ್ದಾರಿ ಮಧ್ಯ ಟೈಯರ್ ಗೆ ಬೆಂಕಿ. ಸಾಲುಗಟ್ಟಿ ನಿಂತ ವಾಹನಗಳು. ಗ್ರಾಮಸ್ಥರ ಆಕ್ರೋಶ.

Cnewstv / 30.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟು. ಹೆದ್ದಾರಿ ಮಧ್ಯ ಟೈಯರ್ ಗೆ ಬೆಂಕಿ. ಸಾಲುಗಟ್ಟಿ ನಿಂತ ವಾಹನಗಳು. ಗ್ರಾಮಸ್ಥರ ಆಕ್ರೋಶ.

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟಿನಿಂದ ಬೇಸತ್ತ ಗ್ರಾಮಸ್ಥರು ಹೆದ್ದಾರಿ ಮಧ್ಯೆ ಟೈಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ ಘಟನೆ ಭದ್ರಾವತಿ ತಾಲೂಕಿನ ಕಾರೆಹಳ್ಳಿಯಲ್ಲಿ ನಡೆದಿದೆ.

ನಿರ್ಮಾಣ ಹಂತದಲ್ಲಿರುವ ಶಿವಮೊಗ್ಗ ಬೆಂಗಳೂರು ಹೆದ್ದಾರಿಯಲ್ಲಿ ಗುಂಡಿಯನ್ನು ತೆಗೆದು ಬ್ಯಾರಿಕೆಟ್ ಹಾಕದೆ ನಿರ್ಲಕ್ಷ ಮಾಡಿದ್ದು, ಕಾರೆಹಳ್ಳಿಯ ಗ್ರಾಮಸ್ಥರು ಪ್ರತಿದಿನ ಒಂದಲ್ಲೊಂದು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಇದನ್ನು ಒದಿ : https://cnewstv.in/?p=11954

ಗ್ರಾಮದ ಆಂಥೋನಿ (30)ಎಂಬ ಹುಡುಗ ಇಂದು ಹೆದ್ದಾರಿ ಕಾಮಗಾರಿ ಅವರು ತೆಗೆದಿದ್ದಂತ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೆಂಗಳೂರು ಶಿವಮೊಗ್ಗ ಹೆದ್ದಾರಿ ಮಧ್ಯೆ ಟ್ಯೆಯರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಈ ಹಿಂದೆಯೂ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು ಸಹ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹಾಗಾಗಿ ಅಧಿಕಾರಿಗಳು ಬರುವವರೆಗೂ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು ಆದರೆ ಪೊಲೀಸರು ಮಧ್ಯಪ್ರವೇಶಸಿ ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*