Breaking News

ಸಂಸದರು, ಶಾಸಕರನ್ನು ಸುತ್ತುವರೆದ VISL ಕಾರ್ಮಿಕರು.

Cnewstv / 30.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಸಂಸದರು, ಶಾಸಕರನ್ನು ಸುತ್ತುವರೆದ VISL ಕಾರ್ಮಿಕರು.

ಶಿವಮೊಗ್ಗ : ಬಿಜೆಪಿ ಕಾರ್ಯಕರ್ಮಕ್ಕೆ VISL ಕಾರ್ಮಿಕರು ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಇಂದು ನಡೆದಿದೆ.

ಭದ್ರಾವತಿಯ ವೀರಶೈವ ಸಭಾಭವನದಲ್ಲಿ ಇಂದು ಬಿಜೆಪಿ ಕಾರ್ಯಕಾರಿ ಸಭೆ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ವಿಐಎಸ್ ಎಲ್ ಕಾರ್ಮಿಕರು ಯತ್ನಿಸಿದರು. ಈ ವೇಳೆ ಕಾರ್ಯಕ್ರಮಕ್ಕೆ ಭಾಗವಹಿಸಲು ಆಗಮಿಸುತ್ತಿದ್ದ ಶಾಸಕ ಕೆ.ಎಸ್ ಈಶ್ವರಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ರವರು ಪ್ರತಿಭಟನಾಕಾರರು ಭೇಟಿ ಮಾಡಿ ಸಮಾಧಾನಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಸಂಸದರೊಂದಿಗೆ ವಾಗ್ವಾದ ನಡೆಸಿದರು. ಬ್ಯಾರಿಕೇಟ್ ದಾಟಿ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದರು.

ಶಾಸಕ ಬಿ ಕೆ ಸಂಗಮೇಶ್ ಪ್ರತಿಭಟನೆಯಲ್ಲಿ ಭಾಗಿ.

ಕಾರ್ಮಿಕರ ಪ್ರತಿಭಟನೆಯಲ್ಲಿ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ ಕೂಡ ಭಾಗಿಯಾಗಿದ್ದರು. ಕಳೆದ ಹತ್ತು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರು ಕೂಡ ಸಂಸದರು ಕಾರ್ಮಿಕರ ಜೊತೆ ಮಾತನಾಡಲು ಬಂದಿರಲಿಲ್ಲ. ಇಂದು ಪಕ್ಷದ ಕಾರ್ಯಕ್ರಮಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*