ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್..
Cnewstv / 25.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್..
ಶಿವಮೊಗ್ಗ: ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹೇಳಿದರು.
ಇದು ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್
ಅದನ್ನು ಹೊಡೆದೋಡಿಸುವುದೇ ಬಿಜೆಪಿಯ ಗುರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಧಾನಸೌಧವನ್ನು ಶುದ್ಧ ಮಾಡುವುದರ ಜೊತೆಗೆ ಭ್ರಷ್ಟಾಚಾರ ಶುದ್ಧ ಮಾಡುತ್ತೇವೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಭೂತದ ಬಾಯಲ್ಲಿ ಭಗವದ್ಗೀತೆ ಬಂದ ಹಾಗಿದೆ. ಡಿ.ಕೆ. ಶಿವಕುಮಾರ್ ಎಷ್ಟು ಭ್ರಷ್ಟರು ಎಂದು ಎಲ್ಲರಿಗೂ ಗೊತ್ತಿದೆ. ಮೊದಲು ಅವರು ಗೋಮೂತ್ರ, ಗಂಗಾಜಲದಲ್ಲಿ ಮನಸ್ಸನ್ನು ಮತ್ತು ಮೈಯನ್ನು ಶುದ್ಧಮಾಡಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ಪ್ರಗತಿಯ ಜೊತೆಗೆ ಭ್ರಷ್ಟಾಚಾರವನ್ನು ಹೊಡೆದೋಡಿಸುವುದೇ ಬಿಜೆಪಿಯ ಮುಖ್ಯ ಗುರಿ. ಪಾರದರ್ಶಕತೆ ಮತ್ತು ಅಧಿಕಾರದ ವಿಕೇಂದ್ರೀಕರಣದ ಮೂಲಕ ಆಡಳಿತ ನಡೆಸುತ್ತಿರುವ ಬಿಜೆಪಿ ಭಯೋತ್ಪಾದನೆಯನ್ನು ಕೊನೆಗಾಣಿಸುತ್ತಿದೆ. ಇಂತಹ ಬಿಜೆಪಿ ಬಗ್ಗೆ ಮಾತನಾಡುವ ಯೋಗ್ಯತೆ, ಡಿ.ಕೆ. ಶಿವಕುಮಾರ್ ಅವರಿಗೂ ಇಲ್ಲ. ಸಿದ್ದರಾಮಯ್ಯನವರಿಗೂ ಇಲ್ಲ. ಅವರ ಅಜ್ಞಾನದ ಮಾತುಗಳು ಅವರಿಗೇ ಮುಳುವಾಗುತ್ತವೆ.
ಸಿದ್ದರಾಮಯ್ಯನಂತವರು ಮುಖ್ಯಮಂತ್ರಿ ಸ್ಥಾನದಲ್ಲಿರುವ ಬಸವರಾಜ ಬೊಮ್ಮಾಯಿ ಅವರಿಗೆ ನಾಯಿಮರಿ, ಅವರ ಮನೆ ಹಾಳಾಗ ಎಂದೆಲ್ಲಾ ಹೇಳುತ್ತಾರೆ ಎಂದರೆ ಜನ ಅವರಿಗೆ ಖಂಡಿತಾ ಪಾಠ ಕಲಿಸುತ್ತಾರೆ. ಮುಂದಿನ ದಿನದಲ್ಲಿ ಕಾಂಗ್ರೆಸ್‌ಮುಕ್ತ ಕರ್ನಾಟಕ ಖಂಡಿತಾ ಆಗುತ್ತದೆ ಎಂದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಭ್ರಷಾಚಾರವನ್ನು ಹುಟ್ಟುಹಾಕಿದ ಪಕ್ಷವೇ ಕಾಂಗ್ರೆಸ್.. 2023-01-25