Breaking News

ಜಲ್ಲಿಕಟ್ಟು ನೋಡಲು ಬಂದಿದ್ದ 14 ವರ್ಷದ ಬಾಲಕ ಗೂಳಿ ದಾಳಿಗೆ ಸಿಲುಕಿ ಮೃತ..

Cnewstv / 22.01.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಜಲ್ಲಿಕಟ್ಟು ನೋಡಲು ಬಂದಿದ್ದ 14 ವರ್ಷದ ಬಾಲಕ, ಗೂಳಿ ದಾಳಿಗೆ ಸಿಲುಕಿ ಮೃತ..

ಬೆಂಗಳೂರು : ಜಲ್ಲಿಕಟ್ಟು ನೋಡಲು ಬಂದಿದ್ದ 14 ವರ್ಷದ ಬಾಲಕ, ಗೂಳಿ ದಾಳಿಗೆ ಸಿಲುಕಿ ಮೃತಪಟ್ಟಂತ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇದನ್ನು ಒದಿ : https://cnewstv.in/?p=11922

ಪೊಂಗಲ್ ಸುಗ್ಗಿಯ ಸಮಯದಲ್ಲಿ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಡಲಾಗುತ್ತದೆ. ಅಂತಯೇ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆದಂತಹ ಗೂಳಿ ಪಳಗಿಸುವ ಕ್ರೀಡೆಯನ್ನು ವೀಕ್ಷಿಸಲು ಸಂಬಂಧಿಕರ ಜೊತೆಗೆ ಬಂದಿದ್ದ ಗೋಕುಲ್ ಎಂಬ ಬಾಲಕನ ಹೊಟ್ಟೆಗೆ ಗೂಳಿ ನುಗ್ಗಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ತಕ್ಷಣವೇ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾದದೆ ಬಾಲಕ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಧರ್ಮಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಲ್ಲಿಕಟ್ಟು ಸಂಬಂಧಿಸಿದಂತೆ ಗೋಕುಲ್ ಸೇರಿ ಈ ವರ್ಷದಲ್ಲಿ ಒಟ್ಟು ನಾಲ್ಕು ಜನರು ಮೃತಪಟ್ಟಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*