Breaking News

ಇಲಾಖೆ ಪರೀಕ್ಷೆಗೆ ವಸ್ತ್ರಸಂಹಿತೆ ಖಂಡಾಯ ಮಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

Cnewstv / 19.01.2023 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಇಲಾಖೆ ಪರೀಕ್ಷೆಗೆ ವಸ್ತ್ರಸಂಹಿತೆ ಖಂಡಾಯ ಮಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ.

ಬೆಂಗಳೂರು : ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಜ.29ರಿಂದ ಫೆ.12ರ ವರೆಗೆ ನಡೆಸುವ ಪರೀಕ್ಷೆಗೆ ವಸ್ತ್ರ ಸಂಹಿತೆಯನ್ನು ಬಿಡುಗಡೆ ಮಾಡಿದೆ.

ಮಹಿಳಾ ಅಭ್ಯರ್ಥಿಗಳಿಗೆ :

ಕಿವಿಯೋಲೆ, ಉಂಗುರ, ನೆಕ್ಲೆಸ್‌ ಧರಿಸಬಾರದು. ಜತೆಗೆ ಹೈ ಹೀಲ್ಡ್‌ ಚಪ್ಪಲಿ ಹಾಕಿ ಪರೀಕ್ಷೆ ಬರೆಯಲು ಅವಕಾಶಗಳಿಲ್ಲ.

ಪುರುಷ ಅಭ್ಯರ್ಥಿಗಳಿಗೆ :

ಕುರ್ತಾ, ಪೈಜಾಮ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಶೂ ಹಾಕುವಂತಿಲ್ಲ. ತೊಡುವ ಬಟ್ಟೆ ಹಗುರ, ಹೆಚ್ಚು ಜಿಪ್‌ ಪಾಕೆಟ್‌, ದೊಡ್ಡ ಬಟನ್‌, ಕಸೂತಿ ಇರಬಾರದು. ಅರ್ಧ ತೋಳಿನ ಶರ್ಟ್‌ ಧರಿಸಬೇಕು. ಮಾಸ್ಕ್ ಧರಿಸುವಂತಿಲ್ಲ ಎಂದು ಕೆಇಎ ಸೂಚಿಸಿದೆ.

ಇದನ್ನು ಒದಿ : https://cnewstv.in/?p=11916

* ಪರೀಕ್ಷಾ ಕೇಂದ್ರದ ಒಳಗೆ ಡಿಜಿಟಲ್‌ ಉಪಕರಣ ಕೊಂಡೊಯ್ಯಬಾರದು,ಪಾರದರ್ಶಕವಾದ ನೀರಿನ ಬಾಟಲಿ ತೆಗೆದುಕೊಂಡು ಹೋಗಬಹುದು.

* ಸರಕಾರ ನೀಡಿರುವ ಫೋಟೋ ಇರುವ ಗುರುತಿನ ಚೀಟಿ ಹೊಂದಿರಬೇಕು. ಪ್ರವೇಶ ಪತ್ರ ಇಲ್ಲದ ಯಾವುದೇ ಅಭ್ಯರ್ಥಿಗೂ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶವಿಲ್ಲ ಎಂದು ಕೆಇಎ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಕೆಇಎ ವೆಬ್‌ಸೈಟ್‌ cetonline.karnataka.gov.in

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*