ಬೀದರ್ ಜಿಲ್ಲೆಯ ಚಂಬೊಲ್ ಗ್ರಾಮ ಪಂಚಾಯತ್ ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿತು, ಆದರೆ ಇಲ್ಲಿನ ಪಿ.ಡಿ.ಓ ಮಂಗಳಾ ಕಂಬ್ಳೆ ಪ್ರಶಸ್ತಿಗೆ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಕಾರಣ ಅವರ ಮೇಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಿರುಕುಳದಿಂದ ಬೇಸತ್ತು ಪ್ರಶಸ್ತಿಯಿಂದ ದೂರವಿದ್ದರು.
ಇಲ್ಲಿನ ಪರಿಸ್ಥಿತಿ ಕುರಿತು ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಚಿವ ಕೃಷ್ಣ ಭೈರೇಗೌಡ ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಯಾರೊಬ್ಬರ ಹೆಸರನ್ನೂ ಪ್ರಸ್ತಾಪಿಸದೆ ತಮಗೆ ಅಗುತ್ತಿರುವ ಕಿರುಕುಳ ಹಾಗು ಮಾನಸಿಕ ಹಿಂಸೆ ಬಗ್ಗೆ ಹೇಳಲಾಗಿದೆ. ಇನ್ನೂ ಇಷ್ಟೆಲ್ಲಾ ನೋವು, ಕಿರುಕುಳ ನೀಡುತ್ತಿದ್ದರೂ ಕೂಡ ಸಾರ್ವಜನಿಕ ಹಿತದೃಷ್ಟಿಯಿಂದ ನಾನು ನನ್ನ ಪ್ರಾಮಾಣಿಕ ಕೆಲಸವನ್ನು ಮುಂದುವರಿಸುತ್ತೇನೆ. ಭ್ರಷ್ಟಾಚಾರಕ್ಕೆ ನಾನು ನನ್ನ ಕಣ್ಣು ಮತ್ತು ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.
C News TV Kannada News Online in cnewstv