Breaking News

ಹಿರಿಯ ನಾಗರೀಕರ ಸಹಾಯವಾಣಿ

Cnewstv / 13.01.2023 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಿರಿಯ ನಾಗರೀಕರ ಸಹಾಯವಾಣಿ

ಶಿವಮೊಗ್ಗ‌ : ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು, ಲಲಿತ ಅಕಾಡೆಮಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಇವರ ಸಹಯೋಗದೊಂದಿಗೆ ಹಿರಿಯ ನಾಗರೀಕ ಸಹಾಯವಾಣಿಯನ್ನು ಸಾಗರ ರಸ್ತೆಯ ಡಿವೈ,ಎಸ್,ಪಿ, ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

ಹಿರಿಯ ನಾಗರೀಕ ಸಹಾಯವಾಣಿ ಮೂಲಕ ತೊಂದರೆಯಲ್ಲಿರುವ ಹಿರಿಯರಿಗೆ ಬೆಂಬಲ, ಉಚಿತ ಕಾನೂನು ನೆರವು, ಹಿರಿಯರ ತೊಂದರೆಗಳಿಗೆ ಸೂಕ್ತ ಸಲಹೆ, ಅಗತ್ಯವಿದ್ದಲ್ಲಿ ಪೊಲೀಸ್ ನೆರವಿನಿಂದ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು.

ಕೌಟುಂಬಿಕ ವಿಷಯದಲ್ಲಿ ರಾಜೀ ಮಾಡಿಸುವುದು, ವೈದ್ಯಕೀಯ ಸಲಹೆ ಮೇರೆಗೆ ಸೇವೆ ಒದಗಿಸುವುದು, ನಿರ್ಲಕ್ಷಿಸಲ್ಪಟ್ಟ ಹಿರಿಯರಿಗೆ ಅಗತ್ಯವಿದ್ದಲ್ಲಿ ಪುನರ್ವಸತಿ (ವೃದ್ಧಾಶ್ರಮ) ಸೌಕರ್ಯ ಒದಗಿಸುವುದು, ವಿವಾದಗಳನ್ನು ಬಗೆಹರಿಸಲು ಮಾರ್ಗೋಪಾಯಗಳನ್ನು ಸೂಚಿಸುವುದು, ಹಿರಿಯ ನಾಗರೀಕರ ಗುರುತಿನ ಚೀಟಿ ಮಾಡಿಸುವುದು, ವೃದ್ಧಾಪ್ಯವೇತನ ಮಾಡಿಸಿಕೊಡಲಾಗುವುದು.

ಹಿರಿಯ ನಾಗರೀಕ ಸಹಾಯವಾಣಿ ಸಂಖ್ಯೆ : 1090 ಆಗಿದ್ದು ಉಚಿತವಾಗಿ ಕರೆ ಮಾಡಿ ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಡಿವೈಎಸ್‍ಪಿ ಕಚೇರಿ ಸಂಖ್ಯೆ 08182-26024 ನ್ನು ಸಂಪರ್ಕಿಸಬಹುದೆಂದು ಹಿರಿಯ ನಾಗರೀಕ ಸಹಾಯವಾಣಿ ಯೋಜನಾ ಸಂಯೋಜಕರು ತಿಳಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*