Cnewstv / 23.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಹಿಂದೂ ಜಾಗರಣ ವೇದಿಕೆಯ 3ನೇ ತೈ ವಾರ್ಷಿಕ ಪ್ರಾಂತ ಸಮ್ಮೇಳನ.
ಶಿವಮೊಗ್ಗ : ಹಿಂದೂ ಜಾಗರಣ ವೇದಿಕೆಯ 3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನವು ಡಿಸೆಂಬರ್ 25 ರಂದು ಎನ್.ಇ.ಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
https://cnewstv.in/?p=11718
ಈ ಸಮ್ಮೇಳನಕ್ಕೆ ಕರ್ನಾಟಕ ದಕ್ಷಿಣ ಪ್ರಾಂತದ 16 ಜಿಲ್ಲೆಗಳಿಂದ ಹಿಂದೂ ಜಾಗರಣ ಘಟಕದ ಸುಮಾರು 4000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನವು 10 ಗಂಟೆಗೆ ಉದ್ಘಾಟನೆಯೊಂದಿಗೆ ಆರಂಭವಾಗಿ 11.30ಕ್ಕೆ ಘೋಷ್ಠಿ ನಡೆಯಲಿದೆ. ಇದರಲ್ಲಿ ಬಂದಂತಹ ಪ್ರತಿನಿಧಿಗಳಿಗೆ ಸಂಘಟನೆ ಹಿಂದೂ ಸಮಾಜ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ. ಮದ್ಯಾಹ್ನ ಊಟದ ನಂತರ 2.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಬಂದಂತಹ ಪ್ರತಿನಿಧಿಗಳ ಶೋಭಾಯಾತ್ರೆ ನಡೆಯಲಿದೆ.
ಶೋಭಾಯಾತ್ರೆಯ ನಂತರ ಸಂಜೆ 4.30ಕ್ಕೆ ಎನ್.ಇ.ಎಸ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ಸಭೆಯ ಮುಖ್ಯ ಅತಿಥಿಗಳಾಗಿ ಶಾಂತವೇರಿ ಶ್ರೀ ರಾಮಮೋಹನ್ ಅವರು ಭಾಗವಹಿಸಲಿದ್ದು ಹಿಂದು ಜಾಗರಣದ ಪ್ರಮುಖರಾದ ಶ್ರೀ ಜಗದೀಶ ಕಾರಂತರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸಭೆಯನ್ನು ಉದ್ದೇಶಿಸಿ ದಿಕ್ಕೂಚಿ ಭಾಷಣವನ್ನು ಮಧ್ಯಪ್ರದೇಶದ ಭೂಪಾಲ್ ಸಂಸದರಾದ ಸ್ವಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ರವರು ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಸಂಚಾಲಕರಾದ ದೊ.ಕೇಶವಮೂರ್ತಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ತೇಜಸ್ವಿ, ಹಾಗೂ ಹಿಂದು ಜಾಗರಣ ವೇದಿಕೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399