Breaking News

ಚಿರತೆ ದಾಳಿಗೆ ಐದು ಮೇಕೆ ಬಲಿ..

Cnewstv / 18.12.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಚಿರತೆ ದಾಳಿಗೆ ಐದು ಮೇಕೆ ಬಲಿ..

ಬೆಂಗಳೂರು : ಬೆಳ್ಳಂಬೆಳಗ್ಗೆ ಚಿರತೆ ದಾಳಿ ನಡೆಸಿ ಐದು ಮೇಕೆಗಳನ್ನು ಕೊಂದು ಹಾಕಿರುವ ಘಟನೆ ಹುಣಸೂರು
ತಾಲೂಕಿನ ಮುತ್ತುರಾಯನ ಹೊಸಹಳ್ಳಿಯಲ್ಲಿ ನಡೆದಿದೆ.

ಹನಗೋಡು ಹೋಬಳಿಯ ಮುತ್ತುರಾಯನ ಹೊಸಹಳ್ಳಿ ಗ್ರಾಮದ ರೈತ ದೇವರಾಜರಿಗೆ ಸೇರಿದ ಮೇಕೆಗಳಾಗಿದ್ದು, ಶನಿವಾರ ಬೆಳಗ್ಗೆ ದೇವರಾಜರ ಪತ್ನಿ ತಮಗೆ ಸೇರಿದ 22 ಮೇಕೆಗಳನ್ನು ತಮ್ಮ ಜಮೀನಿನಲ್ಲಿ ಮೇಯಲು ಬಿಟ್ಟು, ರಸ್ತೆ ಬದಿಯಲ್ಲಿ ಕಾಯುತ್ತಿದ್ದರು. ಈ ವೇಳೆ ಮೇಕೆಗಳ ಮೇಲೆ ದಾಳಿ ನಡೆಸಿ ಮೂರು ಕುರಿಗಳ ರಕ್ತ ಹೀರಿ ಕೊಂದು ಹಾಕಿದ್ದರೆ, ಎರಡು ಮೇಕೆಗಳನ್ನು ಹೊತ್ತೊಯ್ದಿದೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಬೋನ್ ಇರಿಸಲಾಗುವುದೆಂದು ಆರ್.ಎಫ್.ಓ. ನಂದಕುಮಾರ್ ತಿಳಿಸಿದ್ದಾರೆ.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*