ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ, ಅಕ್ರಮವಾಗಿ ಕಡಿತಲೆ ಮಾಡಿದ್ದ ಅಕೇಶಿಯ ಪಲ್ಪ್ ತುಂಡುಗಳ ವಶ.
Cnewstv / 08.12.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ, ಅಕ್ರಮವಾಗಿ ಕಡಿತಲೆ ಮಾಡಿದ್ದ ಅಕೇಶಿಯ ಪಲ್ಪ್ ತುಂಡುಗಳ ವಶ.
ಶಿವಮೊಗ್ಗ : ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ಜಂಟಿ ದಾಳಿ ನಡೆಸಿದ್ದು, ಲಾರಿ ಸಹಿತ ಅಕ್ರಮವಾಗಿ ಕಡಿತಲೆ ಮಾಡಿದ್ದ ಅಕೇಶಿಯ ಪಲ್ಪ್ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹುಳಿಗದ್ದೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಹುಳಿಗದ್ದೆ ಗ್ರಾಮದ ಸ.ನಂ. 43ರ ಪೋಡಿ ಕಾಣದ ಜಮೀನಿನಲ್ಲಿ ಬೆಳೆದಿದ್ದ ಅಕೇಶಿಯ ಪಲ್ಪ್ ತುಂಡುಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಲಾರಿ ಮೂಲಕ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ದಾಳಿ ನಡೆಲಾಗಿದೆ.
ಅರಣ್ಯ ಗುತ್ತಿಗೆದಾರ ರವಿ ಎಂಬಾತ ಅಕ್ರಮವಾಗಿ ಮರಗಳ ಕಡಿತಲೆ ಮಾಡುತ್ತಿದ್ದ. ವಶಕ್ಕೆ ಪಡೆದ ಅಕೇಶಿಯ ಪಲ್ಪ್ ಗಳ ಮೊತ್ತ 20 ಸಾವಿರ ರೂ. ಎಂದು ಅಂದಾಜು ಮಾಡಲಾಗಿದೆ. ಅರಣ್ಯ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನೂ ಕೃತ್ಯಗೆ ಬಳಸಿದ ಕೆಎ-22-ಎ-8262 ಲಾರಿ ವಶಕ್ಕೆ ಪಡೆಯಲಾಗಿದೆ.
ವಲಯ ಅರಣ್ಯಾಧಿಕಾರಿ ಎಂ.ರಾಘವೇಂದ್ರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ಪೊಲೀಸ್ ಅರಣ್ಯ ವಿಚಕ್ಷಣದಳದ ಪಿಎಸ್‌ಐ ವಿನಾಯಕ್, ಹುಂಚ ಉಪ ವಲಯ ಅರಣ್ಯಾಧಿಕಾರಿ ಅಕ್ಷಯ್, ಅರಣ್ಯ ರಕ್ಷಕ ಹರೀಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನು ಒದಿ : http://cnewstv.in/?p=11676
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಅಕ್ರಮವಾಗಿ ಕಡಿತಲೆ ಮಾಡಿದ್ದ ಅಕೇಶಿಯ ಪಲ್ಪ್ ತುಂಡುಗಳ ವಶ. ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ 2022-12-08