Breaking News

ಚೌಡೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಮಾಜಿ ಶಾಸಕರಿಂದ ಪ್ರತಿಭಟನೆ.

Cnewstv / 06.12.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚೌಡೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಗೆ ಆಗ್ರಹಿಸಿ ಮಾಜಿ ಶಾಸಕರಿಂದ ವಿಭಿನ್ನ ಪ್ರತಿಭಟನೆ.

ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪಿನೆ ಮಾಡಬೇಕು ಎಂದು ಅಗ್ರಹಿಸಿ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ರವರು ದೇವಸ್ಥಾನದ ಮುಂಭಾಗದಲ್ಲಿ ಭಜನೆ ಹಾಗೂ ಪ್ರತಿಭಟನೆ ನಡೆಸಿದರು.

ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯ ಪುರಾತನ ದೇವಸ್ಥಾನವಾಗಿದ್ದು ಶ್ರೀಧರ ಸ್ವಾಮಿಗಳು ದೇವಿಯನ್ನ 1967 ರಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಇಲ್ಲಿ ಪ್ರತಿದಿನವೂ ಪ್ರಸಾದದ ವ್ಯವಸ್ಥೆ ನಡೆಯುತ್ತಿತ್ತು ಇಂತಹ ದೇವಸ್ಥಾನವನ್ನು ಕೆಡವಿ ಪುನರ್ ಪ್ರತಿಷ್ಠಾಪನೆ ಮಾಡುವುದಾಗಿ ಕೆಎಸ್ ಈಶ್ವರಪ್ಪನವರು ಭರವಸೆ ನೀಡಿದ್ದರು ಎಂದು ಆರೋಪಿಸಿದ್ದಾರೆ.

ದೇವಸ್ಥಾನದ ನಿರ್ಮಾಣ ಕಾರ್ಯ 2019ರಲ್ಲಿ ಪ್ರಾರಂಭವಾದರೂ ಇದುವರೆಗೂ ಕೂಡ ಮುಗಿದಿಲ್ಲ. ಈಶ್ವರಪ್ಪನವರು ತಾವು ಹಿಂದೂ ಹುಲಿ ಎಂದು ಕರೆದುಕೊಳ್ಳುತ್ತಾರೆ ಆದರೆ ದೇವಸ್ಥಾನಗಳು ಶ್ರದ್ದಾ ಕೇಂದ್ರಗಳು ಹಾಳಾದರೆ ಅದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಶಾಸಕರು ಈ ದೇವಸ್ಥಾನಕ್ಕೆ ಅನುದಾನ ತರಲು ಸಾಧ್ಯವಾಗಿಲ್ಲ ಆದ್ದರಿಂದ ತಕ್ಷಣವೇ ಈಶ್ವರಪ್ಪನವರು ಅಗತ್ಯ ಅನುದಾನವನ್ನು ತಂದು ದೇವಸ್ಥಾನ ನಿರ್ಮಾಣವನ್ನ ಕೂಡಲೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*