Breaking News

ಹೊಸಮನೆ ಬಡಾವಣೆಯ ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ.

Cnewstv / 05.12.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹೊಸಮನೆ ಬಡಾವಣೆಯ ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ.

ಶಿವಮೊಗ್ಗ : ನಗರದ ಹೊಸಮನೆ ಬಡಾವಣೆಯ ರಾಜಕಾಲುವೆ ನಿರ್ಮಾಣಕ್ಕೆ ಶಾಸಕ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆ ನೆರವೇರಿಸುವರು ಮೂಲಕ ಚಾಲನೆ ನೀಡಿದರು. ‌

ಶಾಸಕರ ಅನುದಾನದಲ್ಲಿ ಒಂದು ಕೋಟಿ ಹಣವನ್ನು ಬಿಡುಗಡೆ ಗೊಂಡಿದ್ದು, ರಾಜ ಕಾಲುವೆ ನಿರ್ಮಾಣ ಕಾರ್ಯವು ಶುರುವಾಗಲಿದ್ದು ಹೊಸಮನೆ ಬಡಾವಣೆಯ ನಾಗಪ್ಪ ದೇವಸ್ಥಾನದ ಹತ್ತಿರ ಶಾಸಕರು ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸುವರು.

ಈ ಸಂದರ್ಭದಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಶ್ರೀಮತಿ ಲಕ್ಷ್ಮೀ ಶಂಕರನಾಯಕ್, ವಿರೋಧ ಪಕ್ಷದ ನಾಯಕಿ, ಹೊಸಮನೆ ವಾರ್ಡ್ ಸದಸ್ಯೆ ರೇಖಾ ರಂಗಾಥ್,  ಸೂಡ ಅಧ್ಯಕ್ಷರಾದ ಎನ್ ಜೆ ನಾಗರಾಜ್, ಕೆ ರಂಗನಾಥ ಸೇರಿದಂತೆ ಬಡಾವಣೆಯ ಜನರು ಉಪಸ್ಥಿತರಿದ್ದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*