Breaking News

ಕಾಂಗ್ರೆಸ್ ಪಕ್ಷ ಸಂಘಟಕ ಎಚ್ಎಸ್ ಸುಂದರೇಶ್ ರವರಿಗೆ ಸಿಗುತ್ತಾ ಈ ಬಾರಿಯ ಬಿ ಫಾರಂ ?!!

Cnewstv / 03.12.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾಂಗ್ರೆಸ್ ಪಕ್ಷ ಸಂಘಟಕ ಎಚ್ಎಸ್ ಸುಂದರೇಶ್ ರವರಿಗೆ
ಸಿಗುತ್ತಾ ಈ ಬಾರಿಯ ಬಿ ಫಾರಂ ?!!

https://cnewstv.in/?p=11603

ಶಿವಮೊಗ್ಗ : ಮುಂಬರಲಿರುವ ವಿಧಾನಸಭಾ ಚುನಾವಣೆಗೆ ಅಖಾಡ ತಯಾರಾಗಿದ್ದು ಅಭ್ಯರ್ಥಿಗಳು ತಮ್ಮ ಪಕ್ಷದಿಂದ ಅಧಿಕೃತ ಬಿ ಫಾರ್ಮ್ ಪಡೆಯಲು ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಸಾರ್ವಜನಿಕ ವಲಯಗಳಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗೆ ಬಿ ಫಾರ್ಮ್ ದೊರೆಯಲಿದೆ ಎಂಬ ಮಾತುಗಳು ಹರಿದಾಡುತ್ತಿದೆ ಅದರಂತೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ನಿಂದ ಈ ಬಾರಿ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾಧ್ಯಕ್ಷರಾಗಿರುವ ಎಚ್ಎಸ್ ಸುಂದರೇಶ್ ರವರು ಬಿ ಫಾಮ್ ಪಡೆಯುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಹೌದು ಅಷ್ಟುಕ್ಕೂ ಸುಂದರೇಶ್ ರವರಿಗೆ ಈ ಬಾರಿ ಬಿ ಫಾಮ್ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಕಾರಣವಾಗಿರುವಾ ಮುಖ್ಯ ಅಂಶವೇ ಪಕ್ಷ ಸಂಘಟನೆ. 1986 ರಿಂದ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಭದ್ರ ಅಚ್ಚು ಕಟ್ಡು ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. NSUI, ಯೂಥ್ ಕಾಂಗ್ರೆಸ್ ನ ಜವಾಬ್ದಾರಿಗಳನ್ನು ಹೊತ್ತು ಪಕ್ಷ ಸಂಘಟನೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಡ ಜನರಿಗೆ ಫುಡ್ ಕಿಟ್ ವಿತರಿಸುವ ಮೂಲಕ ಜನ ಮಾನಸದಲ್ಲೂ ಸಹ ಉಳಿದಿದ್ದಾರೆ. ಪಕ್ಷದ ಎಲ್ಲಾ ನಾಯಕರನ್ನ ಸಮದೂಗಿಸಿಕೊಂಡು ಹೋಗುತ್ತಿದ್ದಾರೆ.

ಈಗಾಗಲೇ ಶಿವಮೊಗ್ಗ ನಗರ ವಿಧಾನಸಭಾ ಚುನಾವಣೆಗೆ ಅಕಾಂಕ್ಷಿಗಳಾಗಿ ಕೆಪಿಸಿಸಿಗೆ 11 ರಿಂದ 12 ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದು, ಪಕ್ಷದಿಂದ ಅಧಿಕೃತ ಬಿ ಫಾರ್ಮ್ ಪಡೆಯಲು ತಯಾರಿ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಉಳಿದ ಎಲ್ಲಾ ನಾಯಕರಿಗಿಂತಲೂ ಪಕ್ಷ ಸಂಘಟನೆಯಲ್ಲಿ ಹೆಚ್ಚಾಗಿ ತಮ್ಮನು ತಾವು ತೊಡಗಿಸಿಕೊಂಡ ಕಾರಣ ಹೈಕಮಾಂಡ್ ನಿಂದ ಈ ಬಾರಿ ಸುಂದರೇಶ್ ರವರಿಗೆ ಬಿ ಫಾರಂ ಸಿಗುತ್ತದೆ ಎಂಬ ಮಾತು ಅಭಿಮಾನಿಗಳು ಹಾಗೂ ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.

https://cnewstv.in/?p=11603

 

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 

Leave a Reply

Your email address will not be published. Required fields are marked *

*