“ನನಗೆ ಮದುವೆಗೆ ಹೆಣ್ಣು ಹುಡುಕಿ ಕೊಡಿ” ಜಿಲ್ಲಾರಕ್ಷಣಾಧಿಕಾರಿಗಳಿಗೆ ಪತ್ರ ಬರೆದ ಭೂಪ.
Cnewstv / 25.11.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನನಗೆ ಮದುವೆಗೆ ಹೆಣ್ಣು ಹುಡುಕಿ ಕೊಡಿ ಜಿಲ್ಲಾರಕ್ಷಣಾಧಿಕಾರಿಗಳಿಗೆ ಪತ್ರ ಬರೆದ ಭೂಪ.
ಶಿವಮೊಗ್ಗ : ನನಗೆ ಮದುವೆಗೆ ಹೆಣ್ಣು ಹುಡುಗಿ ಕೊಡಿ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಯುವಕನೊಬ್ಬ ಪತ್ರ ಬರೆದ ವಿಚಿತ್ರ ಘಟನೆ ನಡೆದಿದೆ.
ಸಾಮಾನ್ಯವಾಗಿ ಮದುವೆಯಾಗಲು ವಧುವನ್ನ ಹುಡುಕಿ ಕೊಡುವಂತೆ ಸಂಬಂಧಿಕರು, ವಧು-ವರರ ಅನ್ವೇಷಣಾ ಕೇಂದ್ರ ಅಥವಾ ಸ್ನೇಹಿತರನ್ನು ಕೇಳುತ್ತಾರೆ ಆದರೆ ಇಲ್ಲೊಬ್ಬ ಭೂಪ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾನೆ.
ಹೌದು ಈ ರೀತಿಯ ಘಟನೆ ನಡೆದಿರುವುದು ಮಳೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ. ಈ ರೀತಿ ಎಸ್ ಪಿ ಗೆ ಪತ್ರ ಬರೆದ ಯುವಕನೇ ಪ್ರವೀಣ್. ಭದ್ರಾವತಿಯ ಹೊಸಮನೆ ನಿವಾಸಿ.
ಪ್ರವೀಣ್ ನಿವೃತ್ತ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರ ಪುತ್ರ. ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುತ್ತಿದ್ದ, ಅದರೆ ಸದ್ಯ ತಮ್ಮದೇ ಜಮೀನಿನಲ್ಲಿ ಕೃಷಿಕನಾಗಿ ಕೆಲಸ ಮಾಡುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಗೆ ನನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡಿ ಎಂದು ಮನವಿ ಮಾಡಿ ಪತ್ರವನ್ನು ಬರೆದಿದ್ದಾನೆ. ಪೋಲಿಸ್ ಇಲಾಖೆ ಪತ್ರವನ್ನು ಸ್ವೀಕರಿಸಿದ್ದು, ಇದರ ಉದ್ದೇಶವೇನು? ಪ್ರವೀಣ್ ಏನಾದರೂ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಅಥವಾ ನೋವಿನಲ್ಲಿ ಇದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದನ್ನು ಒದಿ : http://cnewstv.in/?p=11389
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನನಗೆ ಮದುವೆಗೆ ಹೆಣ್ಣು ಹುಡುಕಿ ಕೊಡಿ ಜಿಲ್ಲಾರಕ್ಷಣಾಧಿಕಾರಿಗಳಿಗೆ ಪತ್ರ ಬರೆದ ಭೂಪ. 2022-11-26