Breaking News

kSCA ಅಧ್ಯಕ್ಷ ಪಟ್ಟಕ್ಕೆ ರಘುರಾಮ್ ಭಟ್ಟ ಅವಿರೋಧ ಆಯ್ಕೆ.

Cnewstv / 10.11.2022 / ಬೆಂಗಳೂರು / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

kSCA ಅಧ್ಯಕ್ಷ ಪಟ್ಟಕ್ಕೆ ರಘುರಾಮ್ ಭಟ್ಟ ಅವಿರೋಧ ಆಯ್ಕೆ.

ಬೆಂಗಳೂರು : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮಾಜಿ ಎಡಗೈ ಸ್ಪಿನ್ನರ್ ರಘು ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನವೆಂಬರ್ 20 ರಂದು ನಡೆಯಬೇಕಿದ್ದ ಚುನಾವಣೆಗೆ KSCA ಅಧ್ಯಕ್ಷ ಸ್ಥಾನಕ್ಕೆ ಬಿ.ಎನ್. ಮಧುಕರ್, ಸಂಜಯ್ ಪೋಳ್ ಹಾಗೂ ವಿನಯ್ ಮೃತ್ಯುಂಜಯ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಬುಧವಾರ (ನೆನ್ನೆ) ಕೊನೆಯ ದಿನಾಂಕವಾಗಿತ್ತು. ಅದೇ ರೀತಿ ಈ ಮೇಲ್ಕಂಡ ಸದಸ್ಯರ ನಾಮಪತ್ರ ಹಿಂಪಡೆದ ಪರಿಣಾಮ ಕೆಎಸ್‌ಸಿಎ ಅಧ್ಯಕ್ಷರಾಗಿ ರಘುರಾಮ್ ಭಟ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ ಸ್ಥಾನಗಳಿಗೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನು ಒದಿ :

https://cnewstv.in/?p=11489

ರಘುರಾಮ್ ಭಟ್ ಕಿರು ಪರಿಚಯ..

ಕನ್ನಡ ಪುತ್ತೂರು ಮೂಲದವರಾದ ಅದ್ವೈ ರಘುರಾಮ್ ಭಟ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 82 ಪಂದ್ಯಗಳನ್ನು ಆಡಿದ್ದಾರೆ. 1981-82ರಲ್ಲಿ ಬಾಂಬೆ ವಿರುದ್ಧ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಸೆಮಿಫೈನಲ್ ಕರ್ನಾಟಕದ ಅಭೂತಪೂರ್ವ ಗೆಲುವಿಗೆ ಕಾರಣವಾಗಿತ್ತು. 1980ರಿಂದ 1993ರವರೆಗೆ ಕರ್ನಾಟಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿರುವ ಇವರು, 374 ವಿಕೆಟ್ ಕಬಳಿಸಿದ್ದಾರೆ. ವೃತ್ತಿಜೀವನದಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಇವರು ಪ್ರತಿನಿಧಿಸಿದ್ದರು. 1983ರಲ್ಲಿ ಪಾಕಿಸ್ತಾನದ ವಿರುದ್ಧ ಪ್ರದರ್ಶನ ಭಾರತ ತಂಡ 165ನೇ ಟೆಸ್ಟ್‌ ಆಟಗಾರನಾಗಿ ಪದಾರ್ಪಣೆ ಮಾಡಿದ್ದ ಇವರು, ಅದೇ ತಿಂಗಳಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಟೆಸ್ಟ್‌ ಆಡಿದ್ದರು. ಆ ಬಳಿಕ ಅವರು ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಅಂಪೈರ್‌, ಕೋಚ್‌ ಹಾಗೂ ರಾಜ್ಯ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 2011ರ ಜುಲೈನಲ್ಲಿ ಗೋವಾ ಕ್ರಿಕೆಟ್ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ನೂತನ KSCA ಆಡಳಿತ ಮಂಡಳಿ ಸದ್ಯಸರ ಪಟ್ಟಿ.

ಅಧ್ಯಕ್ಷ : ರಘುರಾಮ್ ಭಟ್ ಎ.

ಉಪಾಧ್ಯಕ್ಷ : ಬಿ.ಕೆ. ಸಂಪತ್ ಕುಮಾರ್:

ಕಾರ್ಯದರ್ಶಿ: ಎ. ಶಂಕರ್

ಜಂಟಿ ಕಾರ್ಯದರ್ಶಿ : ಶಾವೀರ್ ತಾರಾಪುರ

ಖಜಾಂಚಿ : I.S ಜಯರಾಮ್:

ಬೆಂಗಳೂರು ವಲಯದ ಆಡಳಿತ ಸಮಿತಿ ಸದ್ಯರು:

ಎಂ.ಎಸ್ ಕೇಶವ್ (ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್)

ಕೆ.ವಿ ಮಂಜುನಾಥ ರಾಜು (ಹೆಮಂಡ್ಸ್ ಕ್ರಿಕೆಟ್ ಕ್ಲಬ್)

ಎಂ.ಎಸ್. ವಿನಯ್ (ಫ್ರೆಂಡ್ಸ್ ಯೂನಿಯನ್ ಕ್ರಿಕೆಟ್ ಕ್ಲಬ್)

ಮೈಸೂರು ವಲಯದ ಆಡಳಿತ ಮಂಡಳಿ ಸದಸ್ಯರು:
ಹರಿಕೃಷ್ಣ ಕುಮಾರ್ ಆರ್. ಕೆ. (ನ್ಯಾಷನಲ್ ಕ್ರಿಕೆಟ್ ಕ್ಲಬ್, ಮೈಸೂರು)

ಶಿವಮೊಗ್ಗ: ಎಚ್.ಎಸ್.ಸದಾನಂದ (ದುರ್ಗಿಗುಡಿ ಕ್ರಿಕೆಟ್ ಕ್ಲಬ್)

ತುಮಕೂರು: ಕೆ. ಶಶಿಧರ್ (ವೀನಸ್ ಕ್ರಿಕೆಟ್ ಕ್ಲಬ್)

ಧಾರವಾಡ: ನಿಖಿಲ್ ಎಂ ಭೂಸದ್ (ಬಿಡಿಕೆ ಕ್ರೀಡಾ ಫೌಂಡೇಶನ್, ಹುಬ್ಬಳ್ಳಿ)

ರಾಯಚೂರು: ಸುಜಿತ್ ಬೊಹರಾ (ಸಿಟಿ ಎಲೆವನ್ ಕ್ರಿಕೆಟ್ ಕ್ಲಬ್)

ಮಂಗಳೂರು: ರತನ್ ಕುಮಾರ್ (ಮಂಗಳೂರು ಸ್ಪೋರ್ಟ್ಸ್ ಕ್ಲಬ್)

ಆಜೀವ ಸದಸ್ಯರ ವಿಭಾಗ: ಸಂಜಯ್ ಪೋಳ್ ಮತ್ತು ಎನ್.ಎನ್. ಯುವರಾಜ್ ಅವಿರೋಧ ಆಯ್ಕೆ

ಇದನ್ನು ಒದಿ : https://cnewstv.in/?p=11469

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*