Breaking News

7 ದಿನಗಳಿಂದ ನಿಂತೇ ಇರುವ ಹೋರಿ.

Cnewstv / 07.11.2022 / ಶಿವಮೊಗ್ಗ / ಸುದ್ದಿ‌ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

7 ದಿನಗಳಿಂದ ನಿಂತೇ ಇರುವ ಹೋರಿ.

ಶಿವಮೊಗ್ಗ : ಜಿಲ್ಲೆಯ ಸೊರಬ ತಾಲೂಕಿನ ಗ್ರಾಮ ಒಂದರಲ್ಲಿ ಹೋರಿಯೊಂದು ಕಳೆದ ಏಳು ದಿನಗಳಿಂದ ನಿಂತೇ ಇದೆ.

ಹೌದು ಹೀಗೆ ಕಳೆದ ಏಳು ದಿನಗಳಿಂದ ದನದ ಕೊಟ್ಟಿಗೆಯಲ್ಲೇ ಅಲ್ಲಾಡದೆ ನಿಂತ ಜಾಗದಲ್ಲಿ ಕಳೆದ ಏಳು ದಿನಗಳಿಂದ ಈ ಹೋರಿ ನಿಂತಿರುವುದಕ್ಕೆ ಕಾರಣ ಚರ್ಮಗಂಟು ರೋಗ.

ಚರ್ಮ ಗಂಟು ರೋಗದ ( ಲಂಟಿ ಸ್ಕಿನ್ ಡಿಸೀಸ್ ) ಪರಿಣಾಮವಾಗಿ ಸೊರಬ ತಾಲೂಕಿನ ಹಿರೇಚೌಟಿ ಗ್ರಾಮದ ಹೋರಿ ನೋವು ತಾಳಲಾರದೆ ಕಾಲು ಸೋತು ಮಲಗಲು ಪ್ರಯತ್ನಿಸಿ ಅಗದೆ, ಕಳೆದ ಏಳು ದಿನಗಳಿಂದ ನಿಂತಲ್ಲಿ ನಿಂತಿದೆ.

ಇದನ್ನು ಒದಿ : https://cnewstv.in/?p=11441

ಸಂಪೂರ್ಣ ಗ್ರಾಮದಲ್ಲಿ ಈ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು ನೂರಾರು ಜಾನುವಾರುಗಳು ಈ ರೋಗದಿಂದ ನರಳುತ್ತಿದೆ. ಚರ್ಮಗಂಟು ರೋಗಕ್ಕೆ ವ್ಯಾಕ್ಸಿನೇಷನ್ ಬಿಡುಗಡೆ ಮಾಡಿ ತಿಂಗಳುಗಳೇ ಕಳೆದರೂ ಕೂಡ ಇನ್ನೂ ಆ ವ್ಯಾಕ್ಸಿನೇಷನ್ ಈ ಹಳ್ಳಿಗಳನ್ನು ತಲುಪಿಲ್ಲ. ಸರ್ಕಾರ ಗೋಪೂಜೆ ಮಾಡಲು ತೋರುವ ಆಸಕ್ತಿಯನ್ನು ಪಶು ವೈದ್ಯಕೀಯ ಉನ್ನತೀಕರಣಕ್ಕೆ ಯಾಕೆ ತೋರಿಸುತ್ತಿಲ್ಲ ಎಂಬ ಪ್ರಶ್ನೆ ರೈತರದ್ದು.

ರೈತರ ಬೆನ್ನೆಲುಬಾಗಿರುವ ಮತ್ತಷ್ಟು ಜಾನುವಾರುಗಳು ಈ ರೋಗಕ್ಕೆ ಬಲಿಯಾಗುವ ಮುನ್ನ ಸರ್ಕಾರ, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಇತ್ತ ಗಮನ ಹರಿಸಬೇಕಿದೆ.

ಇದನ್ನು ಒದಿ : https://cnewstv.in/?p=11441

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*