Breaking News

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಗುಂಡು.

Cnewstv.in / 26.10.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಗುಂಡು ಹೊಡೆತ.

ಶಿವಮೊಗ್ಗ : ವೆಂಕಟೇಶ್ ನಗರದಲ್ಲಿ ನೆನ್ನೆ ವಿಜಯ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಬಿ (23), ದರ್ಶನ್ (21), ಮತ್ತು ಕಾರ್ತಿಕ್ (21) ಎಂಬ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಇಂದು ಬೆಳಗ್ಗೆ ಬಂಧಿತ ಆರೋಪಿಗಳನ್ನು ಮಹಜರ್ ಗೆ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಅವರ ಕಾಲಿಗೆ ಗುಂಡು ಹೊಡೆದಿದ್ದಾರೆ.

ವಿಜಯ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾದ ಜಬಿಯು ಕೊಲೆಗೆ ಬಳಕೆ ಮಾಡಿದ ಮಾರಕಾಸ್ತ್ರಗಳನ್ನು ಬಚ್ಚಿಟ್ಟಿದ್ದ ಗಾಡಿಕೊಪ್ಪದ ಹರ್ಷಫರ್ ಹೋಟೆಲ್ ಸಮೀಪದ ತುಂಗಾ ಚಾನೆಲ್ ಬಳಿ ಸ್ಥಳ ಮಹಜರ್ ಗೆಂದು ಕರೆದುಕೊಂಡು ಹೋದಾಗ ಜಯನಗರ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಕುಂಸಿ ಇನ್ಸ್ಪೆಕ್ಟರ್ ಹರೀಶ್ ಪಾಟೀಲ್ ರವರು ಆತ್ಮರಕ್ಷಣೆಗಾಗಿ ಜಬಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಜಯನಗರ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿ ಜಬಿಯನ್ನು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನು ಓದಿ :

http://cnewstv.in/?p=11308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*