Breaking News

ಭರ್ಮಪ್ಪ ನಗರದಲ್ಲಿ ಕಲ್ಲು ಬೀಸಿದವರು ಅಂದರ್..

Cnewstv.in / 25.10.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಭರ್ಮಪ್ಪ ನಗರದಲ್ಲಿ ಕಲ್ಲು ಬೀಸಿದವರು ಅಂದರ್..

ಶಿವಮೊಗ್ಗ : ನಿನ್ನೆ ರಾತ್ರಿ ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಕಲ್ಲು ಬೀಸಿ ಹಲ್ಲೆ ಮಾಡಿದವರನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನ ಮಾರ್ಕೆಟ್ ಫೌಜಾನ್ (22) ಅಜರ್ ಅಲಿಯಾಸ್ ಅಜ್ಜು (24), ಫರಾಜ್ (21) ಎಂದು ಗುರುತಿಸಲಾಗಿದೆ. ಇನ್ನು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.‌

ಆರೋಪಿಗಳು ನೆನ್ನೆ ರಾತ್ರಿ 11 ಗಂಟೆಗೆ 2 ಬೈಕುಗಳಲ್ಲಿ ಸೀಗೆಹಟ್ಟಿಗೆ ಹೋಗಿ ಪ್ರವೀಣನಿಗೆ ಅವಾಚ್ಯಶಬ್ದಗಳಿಂದ ಬೈದಿದ್ದು, ನಂತರ ಇಬ್ಬರು ಅರೋಪಿಗಳನ್ನು ಕ್ಲಾರ್ಕ್ ಪೇಟೆಯಲ್ಲಿ ಬಿಟ್ಟು, ಉಳಿದ ಮೂರು ಜನರು ಭರ್ಮಪ್ಪ ನಗರಕ್ಕೆ ಬಂದು ಪ್ರಕಾಶನಿಗೆ ಅವಾಚ್ಯ ಶಬ್ದಗಳಿಂದ ಬೈದು, ಇಟ್ಟಿಗೆ ಕಲ್ಲಿನಿಂದ ಆತನಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತಕ್ಷಣ ಪ್ರಕಾಶ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೆಲವು ದಿನಗಳ ಹಿಂದೆ ಪ್ರಕಾಶ್ ಮತ್ತು ಪ್ರವೀಣ್ ಎಂಬುವರು ಮಾರ್ಕೆಟ್ ಫೌಜನ್ ಗೆ ನಿಂದಿಸಿದ್ದಾರೆ. ಇದೇ ಕಾರಣಕ್ಕೆ ಇಬ್ಬರಿಗೂ ಎಚ್ಚರಿಕೆ ನೀಡುವ ಉದ್ದೇಶದಿಂದ ಆರೋಪಿಗಳು ತೆರಳಿದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೋಲಿಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ :

http://cnewstv.in/?p=11308

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*