Breaking News

ತಡರಾತ್ರಿ ಮುಸುಕುದಾರಿ ವ್ಯಕ್ತಿಗಳಿಂದ ಯುವಕನ ಮೇಲೆ ಹಲ್ಲೆಗೆ ಯತ್ನ.‌

Cnewstv.in / 25.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ತಡರಾತ್ರಿ ಮುಸುಕುದಾರಿ ವ್ಯಕ್ತಿಗಳಿಂದ ಯುವಕನ ಮೇಲೆ ಹಲ್ಲೆಗೆ ಯತ್ನ.‌

ಶಿವಮೊಗ್ಗ : ತಡರಾತ್ರಿ ಶಿವಮೊಗ್ಗದ ಭರ್ಮಪ್ಪ ನಗರದಲ್ಲಿ ಯುವಕನ ಮೇಲೆ ಮುಸುಕುದಾರಿ ಗಳಿಂದ ಹಲ್ಲೆಗೆ ಯತ್ನ ನಡೆಸಲಾಗಿದೆ.

ಪ್ರಕಾಶ್ (25) ಎಂಬುವವರ ಮೇಲೆ ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಇದರಿಂದ ಪ್ರಕಾಶ್ ಅವರ ತಲೆಗೆ ಹಾಗೂ ಮುಖಕ್ಕೆ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಘಟನೆಯಿಂದ ಕೆಳಭಾಗ ಸೀಗೆಹಟ್ಟಿ ಹಾಗೂ ಭರ್ಮಪ್ಪ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇದನ್ನು ಓದಿ :

http://cnewstv.in/?p=11304

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*