“ಶಿಮ್ಲಾ ನಗರ” ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಟೀ ಮಾರುವ ವ್ಯಕ್ತಿ.
Cnewstv.in / 22.10.2022/ ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
“ಶಿಮ್ಲಾ ನಗರ” ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಟೀ ಮಾರುವ ವ್ಯಕ್ತಿ.
ಹಿಮಾಚಲ ಪ್ರದೇಶ : ಶಿಮ್ಲಾ ನಗರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಈ ಬಾರಿ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಅಭ್ಯರ್ಥಿಯಾಗಿ ಟೀ ಮಾರುವ ವ್ಯಕ್ತಿಯನ್ನು ಕಣಕ್ಕಿಳಿಸಲಾಗಿದೆ.
ಶಿಮ್ಲಾದಲ್ಲಿ ಟೀ ಅಂಗಡಿಯನ್ನ ನಡೆಸುತ್ತಿರುವ ಸಂಜಯ್ ಸೂದ್ ನಾಲ್ಕು ಬಾರಿ ಶಿಮ್ಲಾ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಸಚಿವ ಸುರೇಶ್ ಭಾರದ್ವಾಜ್ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಸೂದ್ ಪ್ರಸ್ತುತ ಬಿಜೆಪಿಯ ಶಿಮ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಪಕ್ಷದ ಮಾಧ್ಯಮ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ಪಾಲಿಕೆಗೆ ಎರಡು ಬಾರಿ ಬಿಜೆಪಿ ಟಿಕೆಟ್ ನೀಡಿತ್ತು. ಎರಡು ಬಾರಿ ಕೌನ್ಸಲರ್ ಆಗಿದ್ದರು.
ನನ್ನಂತಹ ಸಾಧಾರಣ ಕಾರ್ಯಕರ್ತನನ್ನು ಗುರುತಿಸಿರುವುದು ಬಹಳ ದೊಡ್ಡ ಗೌರವ ನಾನು ಸ್ವರ್ಗದಲ್ಲಿ ಇದ್ದೇನೆ ಬಿಜೆಪಿಗಾಗಿ ಕೆಲಸ ಮಾಡಲು ಇದು ಉತ್ತಮ ನಿರ್ಧಾರ. 1991 ರಿಂದ ಚಹಾ ಅಂಗಡಿಯನ್ನು ನಡೆಸುತ್ತಿದ್ದೇನೆ. ಇದಕ್ಕೂ ಮೊದಲು ನಾನು ಬಸ್ ನಿಲ್ದಾಣದಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದೆ. ಬಡ ಕುಟುಂಬವಾಗಿದ್ದರು, ಸೇವೆಯ ಭಾವನೆ ಹೃದಯದಲ್ಲಿ ಇತ್ತು. ಕಾಲೇಜು ದಿನಗಳಲ್ಲಿ RSS ವಿದ್ಯಾರ್ಥಿ ಘಟಕವಾದ ABVP ಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.
– ಸಂಜಯ್ ಸೂದ್
ಇದನ್ನು ಓದಿ :
http://cnewstv.in/?p=11287
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
"ಶಿಮ್ಲಾ ನಗರ" ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಟೀ ಮಾರುವ ವ್ಯಕ್ತಿ. ಸಂಜಯ್ ಸೂದ್ 2022-10-22