ಮಂತ್ರಾಲಯ : ಡಿಕೆ ಶಿವಕುಮಾರ್ ಬೆಳ್ಳಿ ಖಡ್ಗವನ್ನು ಸ್ವೀಕರಿಸಲು ಒಪ್ಪದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ.
Cnewstv.in / 21.10.2022/ ರಾಯಚೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399
ಮಂತ್ರಾಲಯ : ಡಿಕೆ ಶಿವಕುಮಾರ್ ಬೆಳ್ಳಿ ಖಡ್ಗವನ್ನು ಸ್ವೀಕರಿಸಲು ಒಪ್ಪದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ.
ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಮಠಕ್ಕೆ ಭೇಟಿ ನೀಡಿ ಬೃಂದಾವನ ದರ್ಶನ ಪಡೆದರು. ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂತ್ರಾಲಯದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಮಠಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದರು.
ಈ ವೇಳೆ ಡಿ.ಕೆ.ಶಿವಕುಮಾರ್ ರವರು ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಗೆ ಬೆಳ್ಳಿ ಖಡ್ಗ ಅರ್ಪಿಸಲು ಮುಂದಾದರು. ಆದರೆ ಸುಬುಧೇಂದ್ರ ತೀರ್ಥರು ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪಲಿಲ್ಲ. ಅದನ್ನು ಸ್ಪರ್ಶಿಸಲೂ ಇಲ್ಲ. ಖಡ್ಗವನ್ನು ನೋಡಿ ನಯವಾಗಿಯೇ ಬೇಡ ಎಂದು ತಿರಸ್ಕರಿಸಿದರು. ಬಳಿಕ ಡಿಕೆಶಿ ಆಪ್ತರು ಖಡ್ಗವನ್ನು ಹಿಂದಕ್ಕೆ ತೆಗೆದುಕೊಂಡರು.
ಈ ವಿಚಾರ ಸಾರ್ವಜನಿಕ ಚರ್ಚೆಗೆ ಗ್ರಾಸವಾದ ನಂತರ ಮಠದ ಮೂಲಗಳು ಘಟನೆ ಕುರಿತು ಸ್ಪಷ್ಟನೆ ನೀಡಿವೆ. ಶ್ರೀಗಳಿಂದ ಆಶೀರ್ವಾದ ಪಡೆಯಲು ಡಿ.ಕೆಶಿವಕುಮಾರ್ ಬೆಳ್ಳಿ ಖಡ್ಗ ತಂದಿದ್ದರು. ಅದೇ ಶ್ರೀಗಳು ಸ್ಪರ್ಶಿಸಲಿಲ್ಲ ಎಂದು ಮಠದ ಹಿರಿಯರು ಹೇಳಿದ್ದಾರೆ.
ಇದನ್ನು ಓದಿ :
http://cnewstv.in/?p=11287
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಂತ್ರಾಲಯ : ಡಿಕೆ ಶಿವಕುಮಾರ್ ಬೆಳ್ಳಿ ಖಡ್ಗವನ್ನು ಸ್ವೀಕರಿಸಲು ಒಪ್ಪದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ. 2022-10-21