Breaking News

ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ : ಅಪ್ಪುಗೆ ಪ್ರಿಯವಾದ ನಾಟಿಕೋಳಿ ಸಾರು ಬಾಡೂಟ.

Cnewstv.in / 19.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ದಿ.ನಟ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯನ್ನು ಶಿವಮೊಗ್ಗದಲ್ಲಿ ಅಭಿಮಾನಿಗಳು ನೆರವೇರಿಸಿದ್ದಾರೆ.

ಶಿವಮೊಗ್ಗದ ವಿದ್ಯಾನಗರದಲ್ಲಿ ವೀರಕೇಸರಿ ಯುವಕರ ಸಂಘದ ವತಿಯಿಂದ ಪುನೀತ್ ರಾಜಕುಮಾರ್ ರವರ ಪುಣ್ಯಸ್ಮರಣೆಯನ್ನು 10 ದಿನ ಮುಂಚಿತವಾಗಿ ಆಚರಿಸಿದ್ದಾರೆ.

ವಿದ್ಯಾನಗರದ ಮುಖ್ಯರಸ್ತೆಯಲ್ಲಿಯೇ ಪುನೀತ್ ಮಂಟಪವನ್ನು ನಿರ್ಮಾಣ ಮಾಡಿ, ಹೂವಿನ ಅಲಂಕಾರ ಮಾಡಿ, ಪುನೀತ್ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ. ಪುನೀತಿಗೆ ಪ್ರಿಯವಾದ ನಾಟಿಕೋಳಿ ಸಾರು ಮಾಡಿ ಎಡೆಯಾಗಿ ಅರ್ಪಿಸಿದ್ದಾರೆ.

ಪುನೀತ್ ಅಭಿಮಾನಿಗಳು 4 ಕುರಿಗಳು ಹಾಗೂ 300 ಕೆಜಿ ಚಿಕನ್ ಬಳಸಿ ಅಡುಗೆ ತಯಾರಿಸಿ ಅನ್ನಸಂತರ್ಪಣೆಯನ್ನು ನೆರವೇರಿಸಿದ್ದಾರೆ. ಪುನೀತ್ ಪುಣ್ಯಸ್ಮರಣ ಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನವರ ಪುತ್ರ ಕೆ.ಈ.ಕಾಂತೇಶ ಅವರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು

ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ : ಅಪ್ಪುಗೆ ಪ್ರಿಯವಾದ ನಾಟಿಕೋಳಿ ಸಾರು ಬಾಡೂಟ.

ಇದನ್ನು ಓದಿ :

http://cnewstv.in/?p=11273

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*