Breaking News

ಜಿಪಂ ನೌಕರನಿಗೆ ಕುಟುಂಬದ ಎದುರೇ ಕಪಾಲಮೋಕ್ಷ ಮಾಡಿದ ಉಪವಿಭಾಗಾಧಿಕಾರಿ. ವಿಡಿಯೋ ವೈರಲ್ !!

Cnewstv.in / 18.10.2022/ ಹಾಸನ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಜಿಪಂ ನೌಕರನಿಗೆ ಕುಟುಂಬದ ಎದುರೇ ಕಪಾಲಮೋಕ್ಷ ಮಾಡಿದ ಉಪವಿಭಾಗಾಧಿಕಾರಿ. ವಿಡಿಯೋ ವೈರಲ್ !!

ಹಾಸನ : ಜಿಲ್ಲಾ ಪಂಚಾಯತ್ ನೌಕರರಿಗೆ ಕುಟುಂಬದ ಎದುರೇ ಉಪವಿಭಾಗಾಧಿಕಾರಿ ಕಪಾಲಮೋಕ್ಷ ಮಾಡಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಿದ್ದು ಲಕ್ಷಾಂತರ ಮಂದಿ ದೇವರ ದರ್ಶನಕ್ಕೆಂದು ಸಾಲುಗಟ್ಟಿ ನಿಂತಿದ್ದಾರೆ. ಅಂತೆಯೇ ಜಿಲ್ಲಾ ಪಂಚಾಯತ್ ನೌಕರ ಶಿವೇ ಗೌಡರು ಸರತಿಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇಗುಲಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಹಾಸನದ ಉಪವಿಭಾಗಾಧಿಕಾರಿ ಜಗದೀಶ್ ಕುಟುಂಬ ಎದುರೇ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಡಿಯೋದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

ಶಿವೇಗೌಡ ಅವರು ತಮ್ಮ ಕುಟುಂಬ ಸಮೇತರಾಗಿ ದೇವಿಯ ದರ್ಶನಕ್ಕೆಂದು ವಿಐಪಿ ಗೇಟಿನಲ್ಲಿ ಬರುತ್ತಿದ್ದ ಸಮಯದಲ್ಲಿ ಕರ್ತವ್ಯದಲ್ಲಿದ್ದ ಕರ್ತವ್ಯದಲ್ಲಿದ್ದ ಉಪವಿಭಾಗಾಧಿಕಾರಿ ಜಗದೀಶ್ ಅವರನ್ನು ತಡೆದು ಏಕವಚನದಲ್ಲಿ ಮಾತನಾಡಿಸಿ, ಕ್ಯೂ ನಲ್ಲಿ ಹೋಗುವುದು ಬಿಟ್ಟು ಇಲ್ಲಿ ಏಕೆ ಬಂದಿದೆ? ಅಂತ ಸಿಟ್ಟಾಗಿದ್ದಾರೆ. ಸೇರಿದ್ದ ಸಾವಿರಾರು ಭಕ್ತರು, ಕುಟುಂಬದವರ ಮುಂದೆ ಕಪಾಳಮೋಕ್ಷ ಮಾಡಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಕೆಲವರು ಈ ಘಟನೆಯನ್ನು ಸಮರ್ಥಿಸಿಕೊಂಡಿದ್ದು ಯಾರಾದರೂ ಒಂದೇ ಎಲ್ಲರೂ ಸಾಲಿನಲ್ಲೇ ಬರಬೇಕು ಎಂದಿದ್ದಾರೆ. ಮತ್ತೆ ಕೆಲವರು ಉಪವಿಭಾಗಾಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗೆ ಕಪಾಳಮೋಕ್ಷ ಮಾಡಿರುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ :

http://cnewstv.in/?p=11244

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*