Breaking News

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕನ್ನ ಹಾಕಿದ ಖದೀಮರು.

Cnewstv.in / 14.10.2022/ ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕನ್ನ ಹಾಕಿದ ಖದೀಮರು.

ಶಿವಮೊಗ್ಗ : ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು ಬೆಳಿಗ್ಗೆ ಕಾಲೇಜು ಸಿಬ್ಬಂದಿಗಳು ಕಾಲೇಜಿಗೆ ಬಂದಾಗ ಬೀಗ ಮುರಿದ ಪರಿಸ್ಥಿತಿ ನೋಡಿ ಕಾಲೇಜಿನ ಕಡತಗಳು ಚೆ ಲ್ಲಾ ಪಿಲ್ಲಿ ಯಾಗಿ ಇರುವುದನ್ನು ಕಂಡು ದಂಗಾಗಿ ಕಾಲೇಜಿನ ಪ್ರಾಚಾರ್ಯರಿಗೆ ಹಾಗೂ ಪೊಲೀಸರಿಗೆ ಘಟನೆ ಬಗ್ಗೆ ಅರಿವು ಮೂಡಿಸಿದರು ಎನ್ನಲಾಗಿದೆ.

ಹೊಸನಗರ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಬೀಗಗಳನ್ನು ತುಂಡರಿಸಿ ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು 15ಕ್ಕೂ ಹೆಚ್ಚು ಕಾಲೇಜಿನ ಕಡತಗಳ ಪ್ರಶ್ನೆ ಪತ್ರಿಕೆ ಉತ್ತರ ಪತ್ರಿಕೆ ಮೊದಲಾದ ದಾಖಲೆಗಳಿರುವ ಗಾಡ್ರೆಜ್ ಬೀರುಗಳನ್ನು ಮುರಿದು ಬೀರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಾಡ್ರೆಜ್ ಬೀರುನಲ್ಲಿದ್ದ ಅಂದಾಜು 20 ಸಹಸ್ರ ಗಳಷ್ಟು ಹಣವನ್ನು ದೋಚಿಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ

ಕಾಲೇಜಿನ ಆವರಣದಲ್ಲಿ ಸಿಸಿ ಕ್ಯಾಮೆರಾಗಳು ಅಳವಡಿಸಿರುವುದು ದು ಷ್ಕರ್ಮಿಗಳ ಶೀಘ್ರ ಪತ್ತೆಗೆ ಸಹಾಯಕವಾಗಿದ್ದು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನು ಓದಿ :

http://cnewstv.in/?p=11237

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*