Breaking News

ಭಾರತ್ ಜೋಡೋ : ಸುರಿವ ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ ರಾಹುಲ್

Cnewstv.in / 3.10.2022/ ಮೈಸೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಭಾರತ್ ಜೋಡೋ : ಸುರಿವ ಮಳೆಯನ್ನು ಲೆಕ್ಕಿಸದೆ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ.

ಮೈಸೂರು : ಭಾರತ್ ಜೋಡೋ ಯಾತ್ರೆಯಲ್ಲಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಐಕ್ಯತಾ ಯಾತ್ರೆ ನೆನ್ನೆ ಮೈಸೂರನ್ನು ತಲುಪಿತ್ತು.‌ ಬಂಡಿಪಾಳ್ಯ ಸಮೀಪ ಆಯೋಜಿಸಿದ್ದ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ವೇಳೆ ಭಾರಿ ಮಳೆಯಾಗಿದೆ ಆದರೆ ಮಳೆಯನ್ನು ಕೂಡ ಲೆಕ್ಕಿಸದೆ ರಾಹುಲ್ ಗಾಂಧಿ ಸಭೆಯನ್ನುದ್ದೇಶಿಸಿ ಮಾತನಾಡಿದ್ದು, ಎಲ್ಲರ ಗಮನಸೆಳೆದಿದೆ.

ಇನ್ನೂ ಕಾರ್ಯಕರ್ತರು ಕೂಡ ಮಳೆ ಎಂದು ಹೋಗದೆ ಪ್ಲಾಸ್ಟಿಕ್ ಚೇರ್ ಗಳನ್ನು ಕೊಡೆಗಳನ್ನಾಗಿಸಿಕೊಂಡು ರಾಹುಲ್ ಗಾಂಧಿ ಭಾಷಣವನ್ನು ಕೇಳಿದರು. ವೇದಿಕೆ ಮೇಲಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡ ಮಳೆಯಲ್ಲಿಯೇ ಕೂತು ಭಾಷಣವನ್ನು ಕೇಳಿಸಿಕೊಂಡರು.

ಇದನ್ನು ಓದಿ : http://cnewstv.in/?p=11172

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*