Breaking News

ಆಹಾರ ದಸರಾದಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ.

Cnewstv.in / 22.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಆಹಾರ ದಸರಾದಲ್ಲಿ ಪಾಲ್ಗೊಳ್ಳಲು ಅರ್ಜಿ ಆಹ್ವಾನ.

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 24 ಮತ್ತು 27 ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಸೆ. 26 ರಿಂದ ಅ.05 ರವರೆಗೆ ಆಹಾರ ಮೇಳವನ್ನು ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

24/09/2022

ನಗರದ ಶ್ರೀ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮ 2 ರಿಂದ 3 ರವರೆಗೆ ಅತ್ತೆ ಸೊಸೆಯರಿಗೆ ಅಡುಗೆ ಮಾಡುವ ಸ್ಪರ್ಧೆ ಹಾಗೂ ಸಂಜೆ 04 ರಿಂದ 05ರವರೆಗೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಅಡುಗೆ ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

27/09/2022

ನಗರದ ಗಾಂಧಿ ಬಜಾರ್ ಶಿವಪ್ಪ ನಾಯಕ ವೃತ್ತದಲ್ಲಿ ಬೆಳಗ್ಗೆ 10.30ಕ್ಕೆ ಮಹಿಳಾ ಶಿಕ್ಷಕಿಯರಿಗೆ ಒಂದು ನಿಮಿಷದಲ್ಲಿ ಸೇಬುಹಣ್ಣು ತಿನ್ನುವ ಸ್ಪರ್ಧೆ ಹಾಗೂ ಮ. 12.00ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಒಂದು ನಿಮಿಷದಲ್ಲಿ ಮುದ್ದೆ, ಬಸ್ಸಾರು ತಿನ್ನು ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ದಿ: 26/09/2022ರಿಂದ ದಿ: 05/10/2022ರ ವರೆಗೆ ವಿನೋಬನಗರದ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಸ್ತ್ರೀಶಕ್ತಿ ಸಂಘಗಳ ಸಹಯೋಗದಲ್ಲಿ 30 ಸ್ಟಾಲ್‍ಗಳಲ್ಲಿ ಸಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ.

ಈ ಎಲ್ಲಾ ಸ್ಪರ್ಧೆ ಮತ್ತು ಆಹಾರ ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಮೊ. ನಂ.: 9902676271 ಮತ್ತು 7795773962 ನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಆಹಾರ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇದನ್ನು ಒದಿ : https://cnewstv.in/?p=11149

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*