Cnewstv.in /21.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹೆಂಡತಿಯನ್ನ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪತಿ.
ಶಿವಮೊಗ್ಗ : ಹೆಂಡತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಶಿವಮೊಗ್ಗ ಜಿಲ್ಲೆಯ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಕರುಣಾಕರ (36) ಎಂಬಾತನು ತನ್ನ ಪತ್ನಿಯ ಅಮಿತಾ (27) ಅಮಿತಾನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. 2 ವರ್ಷಗಳ ಹಿಂದೆ ಕರುಣಾಕರ ಮತ್ತು ಅಮಿತಾಳ ಮದುವೆಯಾಗಿತ್ತು. ಮದುವೆ ಸಮಯದಲ್ಲಿ ಬಂಗಾರ ಮತ್ತು ಹಣವನ್ನು ಕೊಟ್ಟಿದ್ದರೂ ಕೂಡ ಇನ್ನೂ ಹೆಚ್ಚಿನ ಹಣ ಮತ್ತು ಬಂಗಾರವನ್ನ ತರಬೇಕೆಂದು ಕರುಣಾಕರ ಹೆಂಡತಿಯನ್ನ ಪೀಡಿಸುತ್ತಿದ್ದ ಹೆಂಡತಿ ಹಣ ಬಂಗಾರವನ್ನು ಕೊಡಲು ನಿರಾಕರಿಸಿದ ಹಿನ್ನಲೆಯಲ್ಲಿ ತನ್ನ ಮನೆಯಲ್ಲಿಯೇ ಹೆಂಡತಿಯ ಕುತ್ತಿಗೆ ಭುಜ ಕಿವಿ ಮತ್ತು ಪಕ್ಕೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಈ ಸಂಬಂಧ ಅಮಿತಾ ತಾಯಿ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಕರುಣಾಕರ ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=11140
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Recent Comments