Cnewstv.in /20.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಈ ಬಾರಿ ಶಿವಮೊಗ್ಗ ಯುವದಸರಾದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿದೆ ಗೊತ್ತಾ ?
ಶಿವಮೊಗ್ಗ : ಮಹಾನಗರ ಪಾಲಿಕೆ ವತಿಯಿಂದ ಆಚರಿಸಲಾಗುತ್ತಿರುವ ದಸರಾ-2022ರ ಅಂಗವಾಗಿ ಯುವ ದಸರಾವನ್ನು ಸೆ.26 ರಿಂದ 9ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ತಿಳಿಸಿದರು.
ಕಾರ್ಯಕ್ರಮದ ವಿವರ..
* ಸೆ.26ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 11ಗಂಟೆಗೆ ಜಿಲ್ಲಾಮಟ್ಟದ ಗೀತ ಗಾಯನ ಸ್ಪರ್ಧೆ ಹಾಗೂ ಸಂಜೆ 5ಗಂಟೆಗೆ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ ಎಂದರು.
* ಸೆ.27 ರಂದು ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9ಗಂಟೆಗೆ ಪುರುಷರು ಹಾಗೂ ಮಹಿಳೆಯರಿಗಾಗಿ ಸ್ಲೋ ಬೈಕ್ ಪಂದ್ಯಾವಳಿ ಹಾಗೂ ಸಂಜೆ 4ಗಂಟೆಗೆ ಜಿಲ್ಲಾಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ನಡೆಯಲಿದೆ.
* 28ರಂದು ಬೆಳಿಗ್ಗೆ 9ಗಂಟೆಗೆ ಸಹ್ಯಾದ್ರಿ ಕಾಲೇಜಿನಿಂದ ಬಸವೇಶ್ವರ ವೃತ್ತದವರೆಗೆ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ ಹಾಗೂ ಸಂಜೆ 4ಗಂಟೆಗೆ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಕಬ್ಬಡಿ ಪಂದ್ಯಾವಳಿ ನಡೆಯಲಿದೆ ಎಂದರು.
* ಸೆ.29ರ ಸಂಜೆ 4.30ಕ್ಕೆ ಸಿಟಿ ಸೆಂಟರ್ ಮಾಲ್‌ನಲ್ಲಿ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ನಡೆಯಲಿದೆ.
* ಅ.1ರ ಸಂಜೆ 7ಗಂಟೆಗೆ ಫ್ರೀಡಂಪಾರ್ಕ್ ಮೈದಾನದ ಮುಖ್ಯ ವೇದಿಕೆಯಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು.
* ಅ.2ರ ಸಂಜೆ 5ಗಂಟೆಗೆ ಫ್ರೀಡಂಪಾರ್ಕ್ ಮೈದಾನದ ಮುಖ್ಯ ವೇದಿಕೆಯಲ್ಲಿ ಲಹರಿಕ ಕ್ರಿಯೇಷನ್ಸ್ ವತಿಯಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ವಿಶೇಷ ಅತಿಥಿಯಾಗಿ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಗಾಯಕ ಮತ್ತು ನಟ ಗುರುಕಿರಣ್ ಆಗಮಿಸಲಿದ್ದು, ಖ್ಯಾತ ಚಲನಚಿತ್ರ ಗಾಯಕರಾದ ಅನುರಾಧ ಭಟ್, ನಿಖಿಲ್ ಪಾರ್ಥಸಾರಥಿ, ಶಶಿಕಲಾ, ಚೇತನ್ ನಾಯ್ಕ್ ಭಾಗವಹಿಸುತ್ತಿದ್ದು, ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಮತ್ತು ಬೆಂಗಳೂರಿನ ಕಲಾಧರೆ ತಂಡದಿAದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಆ್ಯಂಕರ್ ಆಗಿ ಐಶ್ವರ್ಯ ಅವರು ಭಾಗವಹಿಸುತ್ತಿದ್ದು, ಸುಮನ ಅವರಿಂದ ಲೈವ್ ಪೈಂಟಿAಗ್ ಶೋ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರು ಹಾಗೂ ಪಾಲಿಕೆ ಸದಸ್ಯರಾದ ಇ.ವಿಶ್ವಾಸ್, ರಮೇಶ್ ಹೆಗಡೆ, ಅನಿತಾ ರವಿಶಂಕರ್, ಸುವರ್ಣ ಶಂಕರ್, ಸದಸ್ಯ ಕಾರ್ಯದರ್ಶಿ ಈ.ಹಾಲೇಶಪ್ಪ, ಶಿವಕುಮಾರ್ ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=11135
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Recent Comments