Cnewstv.in /20.09.2022 / ಲಂಡನ್ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Queen Elizabeth II : ಸಕಲ ಗೌರವದೊಂದಿಗೆ ಬ್ರಿಟನ್ ಜನತೆಯಿಂದ ರಾಣಿ ಎಲಿಜಬೆತ್ 2 ಗೆ ಅಂತಿಮ ವಿದಾಯ.
ಲಂಡನ್ : ಬ್ರಿಟನ್ ನ ದೀರ್ಘಾವಧಿ ಆಳಿದ ರಾಣಿ 2 ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಬೆಳಗ್ಗೆ 6.30 ರಿಂದ ಸುದೀರ್ಘವಾಗಿ ಜನರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳು ನೆರವೇರಿತು. ಭಾರತದ ಕಾಲಮಾನ ಮಧ್ಯರಾತ್ರಿ 12 ಗಂಟೆಯ ಹೊತ್ತಿಗೆ ಅಂತ್ಯಸಂಸ್ಕಾರದ ಪ್ರಕ್ರಿಯೆಗಳು ಮುಗಿಯಿತು.
https://twitter.com/ChaiP93/status/1571967104785739777?t=5to-yGU4DFjkRy8wVKWxZQ&s=19
ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಅಂತ್ಯಕ್ರಿಯೆಗೂ ಮುನ್ನ, ಅಗಲಿದ ರಾಣಿಗೆ ಗೌರವಾರ್ಥ ಇಡೀ ಬ್ರಿಟನ್ ಎರಡು ನಿಮಿಷ ಕಾಲ ಮೌನಾಚರಣೆ ಮಾಡಿತು. ಬ್ರಿಟನ್ ರಾಣಿಯ ಅಂತ್ಯವನ್ನು ತೆರೆಯುವ ಪರದೆಯಲ್ಲಿ ಪ್ರಸಾರ ಮಾಡಲಾಯಿತು. ಜಾಗತಿಕ ಮಟ್ಟದಲ್ಲಿ ಹಲವು ಮಂದಿ ವೀಕ್ಷಿಸಿದರು.
ಅಮೆರಿಕ ಅಧ್ಯಕ್ಷ ಜೋಬೈಡನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ 2ಸಾವಿರ ಗಣ್ಯರು ರಾಣಿ ಎಲಿಜಬೆತ್‌ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಣಿಗೆ ಅಂತಿಮ ವಿದಾಯ ಹೇಳಲಾಯಿತು.
1965 ರಲ್ಲಿ ವಿನ್‌ಸ್ಟನ್ ಚರ್ಚಿಲ್ ಅಂತ್ಯಕ್ರಿಯೆಯನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರಿ ಗೌರವವನ್ನು ನೀಡಲಾಯಿತು. ಇದಾದ ನಂತರ ಬ್ರಿಟನ್‌ನಲ್ಲಿ ಇಂತಹ ಕಾರ್ಯಕ್ರಮ ನಡೆದಿರೋದು ಇದೇ ಮೊದಲು.
ಇದನ್ನು ಒದಿ : https://cnewstv.in/?p=11132
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
Recent Comments