Cnewstv.in / 12.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಹಿಳಾ ದಸರಾ ಪೂರ್ವಭಾವಿ ಸಭೆಗೆ, ನಿರೀಕ್ಷೆಗೂ ಮೀರಿ ಸೇರಿದ ಮಹಿಳೆಯರು.
ಶಿವಮೊಗ್ಗ : ನಾಡಹಬ್ಬ ದಸರಾ ಪ್ರಯುಕ್ತ, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಮಹಿಳಾ ದಸರಾ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಇಂದು ಮಧ್ಯಾಹ್ನ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ನಡೆದ ಈ ಪೂರ್ವಭಾವಿ ಸಭೆಗೆ ಅನೇಕ ಮಹಿಳೆಯರು, ಸಂಘ – ಸಂಸ್ಥೆಗಳಿಗೆ ಆಹ್ವಾನ ನೀಡಲಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ಪೂರ್ವಭಾವಿ ಸಭೆಗೆ ಅಗಮಿಸಿದ ಕಾರಣ ಕುಳಿತುಕೊಳ್ಳಲು ಸಹ ಸ್ಥಳವಾಕಾಶ ಇರಲಿಲ್ಲ. ನಿಂತುಕೊಂಡೇ ತಮ್ಮ ಅನಿಸಿಕೆ, ಸಲಹೆಗಳನ್ನು ನೀಡಲಾಯಿತು.
ಕಳೆದ ಎರಡು ವರ್ಷಗಳಿಂದ ನಾಡಹಬ್ಬ ದಸರಾ ಕೊರೊನಾ ಮಹಾಮಾರಿಯ ಕಾರಣದಿಂದ ವೈಭವದಿಂದ ನಡೆದಿರಲಿಲ್ಲ ಆದರೆ ಈ ಬಾರಿ ಹೆಚ್ಚು ವೈಭವದಿಂದ ನಡೆಯಲಿದೆ. ಮಹಿಳಾ ದಸರಾ ಪೂರ್ವಭಾವಿ ಸಭೆಗೆ ಕಳೆದ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದು ಸಂತೋಷವಾಗಿದೆ. ಮಹಿಳಾ ದಸರಾ ಈ ಬಾರಿ ಬಹಳಷ್ಟು ವಿಜೃಂಭಣೆಯಿಂದ ನಡೆಯಲಿದೆ ಎಂಬ ವಿಶ್ವಾಸವನ್ನು ವಿರೋಧ ಪಕ್ಷದ ನಾಯಕಿ ಹಾಗೂ ಮಹಿಳಾ ದಸರಾ ಸಮಿತಿ ಅಧ್ಯಕ್ಷರಾದ ರೇಖಾ ರಂಗನಾಥ್ ವ್ಯಕ್ತಪಡಿಸಿದರು.
ಪೂರ್ವಭಾವಿ ಸಭೆಯಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಮಹಿಳಾ ದಸರಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ರೇಖಾ ರಂಗನಾಥ್, ಸದಸ್ಯರಾದ ಮಂಜುಳ ಶಿವಣ್ಣ, ಸುರೇಖಾ ಮರಳಿಧರ್ ಹಾಗೂ ಪಾಲಿಕೆ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=11093
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv