Breaking News

ಬೆಳಗಿನ ಜಾವ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

Cnewstv.in / 10.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬೆಳಗಿನ ಜಾವ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗ : ಇಂದು ಬೆಳಗ್ಗಿನ ಜಾವ 4 ಗಂಟೆಗೆ ಹಿಂದೂ ಮಹಾಸಭಾ ಗಣಪತಿಯನ್ನು ಕೋಟೆ ಭೀಮೇಶ್ವರ ದೇವಸ್ಥಾನದ ಹಿಂಭಾಗದ ತುಂಗಾನದಿಯಲ್ಲಿ ವಿಸರ್ಜಿಸಲಾಯಿತು‌.

ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಬೆಳಗಿನ ಜಾವದವರೆಗೂ ಅಷ್ಟೇ ಅದ್ದೂರಿಯಾಗಿ ಜನಸ್ತೋಮದ ನಡುವೆ ನೆರವೇರಿತು

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗಣಪತಿ ವಿಸರ್ಜನೆ ತಡವಾಗಿ ನೆರವೇರಿಸಲಾಯಿತು ಪ್ರತಿಬಾರಿಯೂ ತಡ ರಾತ್ರಿ‌ 1 ರಿಂದ 2 ಗಂಟೆಯೊಳಗೆ ಗಣಪತಿ ವಿಸರ್ಜನೆ ನೆರವೇರಿಸಲಾಗುತ್ತಿತ್ತು. ಎಲ್ಲೆಲ್ಲೂ ಕೇಸರಿ ಶಾಲು, ಪೇಟ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನರು. ನಗರದ ತುಂಬಾ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಇದನ್ನು ಒದಿ : https://cnewstv.in/?p=11076

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*