Breaking News

ಚಿರತೆ ಕಾರ್ಯಾಚರಣೆಗೆ ವಿಫಲ, ಬರಿಗೈಯಲ್ಲಿ ಹಿಂತಿರುಗಿದ್ದ ಅರಣ್ಯ ಇಲಾಖೆ.

Cnewstv.in / 05.09.2022 / ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಚಿರತೆ ಕಾರ್ಯಾಚರಣೆಗೆ ವಿಫಲ, ಬರಿಗೈಯಲ್ಲಿ ಹಿಂತಿರುಗಿದ್ದ ಅರಣ್ಯ ಇಲಾಖೆ.

ಬೆಳಗಾವಿ : ಕಳೆದ ಒಂದು ತಿಂಗಳಿನಿಂದ ಬೆಳಗಾವಿ ಜನರ ಚಿಂತೆಗೆ ಕಾರಣವಾದ ಚಿರತೆ ಕೊನೆಗೂ ಸಿಗಲಿಲ್ಲ. ಅರಣ್ಯ ಇಲಾಖೆ ಬರಿಗೈಯಲ್ಲಿ ಹಿಂದಿರುಗಿದೆ.

ಬೆಳಗಾವಿ ಗಾಲ್ಫ್ ಕೋರ್ಸ್ ಪೊದೆಯೊಳಗೆ ಅಡಗಿದ್ದ ಚಿರತೆಯನ್ನು ಹುಡುಕಲು ಅರಣ್ಯ ಇಲಾಖೆಯ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದರು ಆದರೆ ಕಾರ್ಯಾಚರಣೆ ವಿಫಲವಾಗಿದೆ. ಆಗಸ್ಟ್ 5ರಂದು ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿದ್ದ ಚಿರತೆ,ಮತ್ತೆ ಆಗಸ್ಟ್ 22ರಂದು ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಗಾಲ್ಫ್ ಕ್ಲಬ್ ಸೇರಿಕೊಂಡಿತ್ತು.

ಚಿರತೆ ಸೆರೆಗಾಗಿ ಸಕ್ರೆಬೈಲ್ ನಿಂದ ಎರಡು ಆನೆಗಳು, ಹತ್ತು ಜನ ಶಾರ್ಪ್ ಶೂಟರ್, 22 ಟ್ರ್ಯಾಕ್ ಕ್ಯಾಮರಾ, 9 ಬೋನುಗಳನ್ನು ಇಡಲಾಗಿತ್ತು ಆದರೂ ಸಹ ಚಿರತೆ ಚಿರತೆ ಪತ್ತೆಯಾಗಿಲ್ಲ.‌

ಗಾಲ್ಫ್ ಕ್ಲಬ್ ನಿಂದ ಚಿರತೆ ಕಾಡಿಗೆ ಹೋಗಿರಬಹುದು ಎಂದು ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಹಾಗಾಗಿ ಜನರು ಭಯಪಡುವ ಅವಶ್ಯಕತೆ ಇಲ್ಲ. ನಾಳೆಯಿಂದ ಶಾಲೆಗಳು ಎಂದಿನಂತೆ ಆರಂಭವಾಗಬಹುದು ಎನ್ನಲಾಗುತ್ತಿದೆ.

ಇದನ್ನು ಒದಿ : https://cnewstv.in/?p=11034

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*