Breaking News

ಕಾನೂನು ಬಾಹೀರವಾಗಿ ಸರ್ಕಾರಿ ಶಾಲೆಯ 2 ನೂತನ ಕೊಠಡಿ ಉದ್ಘಾಟನೆ : ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಮಾನತಿಗೆ ಒತ್ತಾಯ.

Cnewstv.in / 02.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಾನೂನು ಬಾಹೀರವಾಗಿ ಸರ್ಕಾರಿ ಶಾಲೆಯ 2 ನೂತನ ಕೊಠಡಿ ಉದ್ಘಾಟನೆ : ಶಿಕ್ಷಣ ಇಲಾಖೆಯ ಅಧಿಕಾರಿಗಳ ಅಮಾನತಿಗೆ ಒತ್ತಾಯ.

ಶಿವಮೊಗ್ಗ : ಶಿಕ್ಷಣ ಇಲಾಖೆಯ ಶಿವಮೊಗ್ಗ ಜಿಲ್ಲಾ ಉಪಾನಿರ್ದೇಶಕರನ್ನು ಮತ್ತು ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತಕ್ಷಣ ಅಮಾನತ್ತು ಮಾಡಬೇಕು ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪುರಲೆಯ ಸರ್ಕಾರಿ ಶಾಲೆಯಲ್ಲಿ 2 ನೂತನ ಕೊಠಡಿ ಸುಮಾರು 15 ಲಕ್ಷ ರೂಗಳ ಸರ್ಕಾರದ ವಿಶೇಷ ಅನುದಾನದಲ್ಲಿ ಶಾಲೆ ಅಭಿವೃದ್ದಿ ಪಡಿಸಿದ್ದು, ಈ ಅಭಿವೃದ್ದಿ ಪಡಿಸಿರುವ ಕಟ್ಟಡವನ್ನು ಮಾನ್ಯ ಶಿವಮೊಗ್ಗ ಕ್ಷೇತ್ರದ ಶಾಸಕರ ಪುತ್ರರಾದ ಕೆ.ಈ.ಕಾಂತೇಶ್ ರವರುವ ಉದ್ಗಾಟನೆ ಮಾಡಿದ್ದಾರೆ.

ಶಿವಮೊಗ್ಗ ಕ್ಷೇತ್ರದ ಶಾಸಕರನ್ನು ಓಲೈಕೆ ಮಾಡಲು ಅವರ ಪುತ್ರರಿಂದ ಈ ಕಾಮಗಾರಿಯನ್ನು ಉದ್ಘಾಟನೆ ಮಾಡಿಸಿರುತ್ತಾರೆ. ಇವರಿಗೆ ಉದ್ಘಾಟನೆ ಮಾಡಲು ಯಾವುದೇ ರೀತಿಯ ಅರ್ಹತೆ ಇರುವುದಿಲ್ಲ ಆದರೂ ಕೂಡ ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಿ.ಇ.ಓ ಕೂಡ ಉಪಸ್ಥಿತರಿರುತ್ತಾರೆ, ಈ ಉದ್ಘಾಟನೆಯನ್ನು ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರು ಅಥವಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಮಾಡಿದ್ದರೆ ಸರಿ ಇರುತ್ತಿತ್ತು ಅದರೆ ಇವರು ಕಾನೂನು ಬಾಹೀರವಾಗಿ ಉದ್ಘಾಟನೆ ಮಾಡಿರುವುದು ಶಿಷ್ಟಾಚಾರದ ಉಲ್ಲಂಗನೆಯಾಗಿರುತ್ತದೆ. ಇವರ ಮೇಲೆ ಶಿಸ್ಥಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿರೋಧಪಕ್ಷದ ನಾಯಕಿ ರೇಖಾ ರಂಗನಾಥ್ ಹಾಗೂ ಪಾಲಿಕೆ ಸದಸ್ಯರುಗಳಾದ ಎಚ್ ಸಿ ಯೋಗೀಶ್, ಯಮುನಾ ರಂಗೇಗೌಡ, ಮಂಜುಳಾ ಶಿವಣ್ಣ, ಪಕ್ಷದ ಮುಖಂಡರಾದ ಕೆ ರಂಗನಾಥ್, ರಂಗೇಗೌಡ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರಲೆ ಮಂಜು, ಮುಖಂಡರಾದ ಪುರಲೆ ಚಂದ್ರಪ್ಪ, ಕಾರ್ತಿಕ್ ಹಾಗೂ ಮೋಹನ್ ಇದ್ದರು

ಇದನ್ನು ಒದಿ : https://cnewstv.in/?p=11008

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*