Cnewstv.in / 01.09.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಪ್ಪ ನಾಯಕ ಮಾರುಕಟ್ಟೆ ಗುತ್ತಿಗೆ ಅವಧಿಗೆ ಸಂಬಂಧಿಸಿದ ತನಿಖಾ ವರಧಿಯನ್ನು ಬಹಿರಂಗಗೊಳಿಸಲು ಆಗ್ರಹಿ ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಪ್ರತಿಭಟನೆ.
ಶಿವಮೊಗ್ಗ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಬ್ಯಾರಿಸ್ ಸಂಸ್ಥೆಯವರು 99 ವರ್ಷ ಶಿವಪ್ಪ ನಾಯಕ ಮಾಲ್ ಅನ್ನು ಅವರ ಸಂಸ್ಥೆಗೆ ಬಾಡಿಗೆ ಆಧಾರದ ಮೇಲೆ ಮುಂದುವರೆಸಲು ಕೇಳಿಕೊಂಡಿದ್ದರು. ಈ ವಿಚಾರವಾಗಿ ನಗರದ ಅನೇಕ ಸಂಘ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಹಾಗೂ ಜೆ.ಡಿ.ಎಸ್ ಪಕ್ಷದ ಪಾಲಿಕೆ ಸದಸ್ಯರುಗಳು ವಿರೋಧವನ್ನು ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ಸಾಮಾನ್ಯ ಸಭೆ ತಾರತಮ್ಯಕ್ಕೆ ಹೋಗಿತ್ತು.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಈ ವಿಷಯವನ್ನು ತರಲು ಹೇಳಿದವರು ಯಾರು? ಹಾಗೂ ಸಭೆಗೆ ತಂದವರು ಯಾರು? ಏಕೆಂದರೆ ಅವಧಿ ಮುಗಿಯುವ 3 ತಿಂಗಳ ಮುಂಚಿತವಾಗಿ ಮಾತ್ರ ಬ್ಯಾರಿಸ್ ಸಂಸ್ಥೆಯವರು ಬಾಡಿಗೆ ಮುಂದುವರಿಸಲು ಕೇಳುವ ಅಧಿಕಾರವಿರುತ್ತದೆ. ಆದುದ್ದರಿಂದ ಈ ವಿಚಾರವಾಗಿ ಬಹಳಷ್ಟು ಚರ್ಚೆಗಳು ನಡೆದವು. ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನಿತ್ಯ ಇದರ ಬಗ್ಗೆ ಚರ್ಚೆಯಾಗಿತ್ತಿತ್ತು. ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವಾಗಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ರವರು ಹೋರಾಟ ಮಾಡಿ ಇದರ ಬಗ್ಗೆ ಸೂಕ್ತ ತನಿಕೆ ಆಗಬೇಕೆಂದು ಮಹಾಪೌರರಿಗೆ ಒತ್ತಾಯ ಮಾಡಿದರು. ಆಗ ಮಹಾಪೌರರು ಸಾಮಾನ್ಯ ಸಭೆಯನ್ನು 15 ನಿಮಿಷ ಮುಂದೂಡಿದರು. ತದನಂತರ ಪೂಜ್ಯ ಮಹಾಪೌರರು 5 ಜನ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳನ್ನು
ಒಳಗೊಂಡ ಸಮಿತಿಯನ್ನು ರಚಿಸಿದರು ಸಮಿತಿ ವರದಿ ಬರಲು ಸುಮಾರು 20 ತಿಂಗಳುಗಳಾಗಿದ್ದು, ಈಗ ಸಮಿತಿ ವರದಿ ಬಂದಿದೆ ಎಂದು ತಿಳಿದು ಬಂದಿರುತ್ತದೆ, ಆದ್ದರಿಂದ ಈ ಸಮಿತಿ ವರದಿ ಏನಿದೆ ಎಂಬುದು ಪಾಲಿಕೆ ಸದಸ್ಯರು,ಸಾರ್ವಜನಿಕರು ತಿಳಿಯಬೇಕೆಂದು ದಿನಾಂಕ: 08-08-2022 ರಂದು ಪೂಜ್ಯ ಮಹಾಪೌರರಲ್ಲಿ ಮತ್ತು ಆಯುಕ್ತರಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರ ನಿಯೋಗ, ಕೂಡಲೆ ಬಹಿರಂಗ
ಪಡಿಸಬೇಕೆಂದು ಮನವಿ ನೀಡಿದ್ದು ಇಂದಿಗೆ 22 ದಿನಗಳೇ ಕಳೆದರೂ ಯಾವುದೇ ತನಿಕ ವರದಿಯನ್ನು ಬಹಿರಂಗ ಪಡೆಸಿದೆ ಇರುವುದು ಅತ್ಯಂತ ಖಂಡನಿಯ ಕೂಡಲೇ ಪಾಲಿಕೆ ಸದಸ್ಯರುಗಳಿಗೆ ಶಿವಮೊಗ್ಗ ನಗರದ ಜನತೆಗೆ ತನಿಕಾ ವರದಿಯನ್ನು ಬಹಿರಂಗ ಪಡಿಸಬೇಕೆಂದು ಪಾಲಿಕ ಸದಸ್ಯರಿಂದ ಪ್ರತಿಭಟನಾ ಧರಣಿ ನಡೆಸಲಾಯಿತು.
ಇದನ್ನು ಒದಿ : https://cnewstv.in/?p=10998
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv