Cnewstv.in / 30.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸೋಮಿನಕೊಪ್ಪದಲ್ಲಿ ಸೆರೆಸಿಕ್ಕ ಚಿರತೆ.
ಶಿವಮೊಗ್ಗ : ಕಳೆದ ಎರಡು ಮೂರು ತಿಂಗಳಿಂದ ತೀವ್ರ ಆತಂಕವನ್ನ ಮೂಡಿಸಿದ್ದ ಚಿರತೆ ಇಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ.
ತಾಲೂಕಿನ ಕೊಮ್ಮನಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲದಳ್ಳಿ ಸೋಮಿನಕೊಪ್ಪದಲ್ಲಿ ಮೂರು ತಿಂಗಳುಗಳಿಂದ ಆಗಾಗ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಇಂದು ಬೆಳಗ್ಗೆ ಬಿದ್ದಿದೆ.
ಗ್ರಾಮದ ರೈತನೊಬ್ಬನು ಜಮೀನಿಗೆ ಹೋಗುವ ಸಂದರ್ಭದಲ್ಲಿ ಚಿರತೆ ಬೋನಿಗೆ ಬಿದ್ದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಭಾಗಗಳಲ್ಲಿ ಚಿರತೆ ಅನೇಕ ಜಾನುವಾರುಗಳು, ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿತ್ತು ಹೀಗಾಗಿ ಈ ಭಾಗದ ಜನರಲ್ಲಿ ಆತಂಕ ಹೆಚ್ಚಾಗಿತ್ತು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಬೋನನ್ನು ಇಟ್ಟು ಸೆರೆ ಹಿಡಿಯಲು ಮುಂದಾಗಿ, ಅಂತಿಮವಾಗಿ ಚಿರತೆಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದೆ.
ಇದನ್ನು ಒದಿ : https://cnewstv.in/?p=10981
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv