Breaking News

ಪಾಲಿಕೆ ಅಯುಕ್ತರ ಕಚೇರಿಯ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ.

Cnewstv.in / 26.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪಾಲಿಕೆ ಅಯುಕ್ತರ ಕಚೇರಿಯ ಮುಂದೆ ಮಹಿಳೆಯ ಏಕಾಂಗಿ ಪ್ರತಿಭಟನೆ.

ಶಿವಮೊಗ್ಗ : ಮಹಾನಗರ ಪಾಲಿಕೆ ಅಯುಕ್ತರ ಕಚೇರಿಯ ಮುಂದೆ ಮಹಿಳೆಯೊಬ್ಬರು ಏಕಾಂಗಿ ಹೋರಾಟ ಮಾಡುತ್ತಿದ್ದಾರೆ.

ವಿನೋಬನಗರ ವಾರ್ಡ್ ನಂಬರ್ 7 ರ, ಕೆಎಚ್ ಬಿ ಕಾಲೋನಿ, MIG 59ರ ಮನೆಯಲ್ಲಿ ವಾಸವಾಗಿರುವ ರತ್ನಮ್ಮ ಎಂಬುವವರ ಮನೆಯ ಹಿಂಭಾಗದಲ್ಲಿ ಸ್ಥಳೀಯ ಕಾರ್ಪೊರೇಟರ್ ಒಬ್ಬರ ಮನೆ ಇದ್ದು, ಅವರ ಮನೆಯ ಮೇಲೆ ಅಳವಡಿಸಿರುವ ಗ್ರೀಲ್ ಶೀಟ್ ನಿಂದ ನಮ್ಮ ಮನೆಯ ಕಟ್ಟಡಕ್ಕೆ ಹಾನಿಯಾಗುತ್ತಿದೆ ಎಂದು ಕಳೆದ 8 ವರ್ಷಗಳಿಂದ ಪಾಲಿಕೆ ಆಯುಕ್ತರಿಗೆ ದೂರು ನೀಡುತ್ತಿದ್ದು ಯಾವುದೇ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಮಹಿಳೆ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.

ಗ್ರಿಲ್ ಮೇಲೆ ಶೀಟ್ ಅಳವಡಿಸಿದ್ದರಿಂದ ನಮ್ಮ ಕಟ್ಟಡಕ್ಕೆ ಹಾನಿ ಉಂಟಾಗುತ್ತಿದೆ. ವಿದ್ಯುತ್ ಅವಘಡಕ್ಕೆ ಕಾರಣವಾಗಿದೆ. 2014 ರಲ್ಲಿ ಅಂದಿನ ಆಯುಕ್ತರ ಆದೇಶದ ಮೇರೆಗೆ ಗೃಹನಿರ್ಮಾಣ ಮಂಡಳಿಯಿಂದ ಅಧಿಕೃತ ವರದಿಯನ್ನು ತರಿಸಿಕೊಂಡು ಗ್ರಿಲ್ ಅಳವಡಿಸಿದ್ದನ್ನು ತೆರವುಗೊಳಿಸಲು ಸೂಚಿಸಿದ್ದರು. ಆದರೆ ರಾಜಕೀಯ ಪ್ರಭಾವದಿಂದ ನನಗೆ ನ್ಯಾಯ ಸಿಗುತ್ತಿಲ್ಲ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಇದೆ ಎಂದು ಕ್ರಮಕೈಗೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನು ಒದಿ : https://cnewstv.in/?p=10978

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*