ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ.
Cnewstv.in / 24.08.2022 / ಬೆಳಗಾವಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ.
ಬೆಳಗಾವಿ : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ, ಜನವಸತಿ ಪ್ರದೇಶಗಳು ಪ್ರತ್ಯಕ್ಷವಾಗಿ ಜನರಲ್ಲಿ ಮತ್ತಷ್ಟು ಆತಂಕವನ್ನು ಹುಟ್ಟಿಸಿದ್ದು, ಚಿರತೆ ಸೆರೆಹಿಡಿಯಲು ಶಿವಮೊಗ್ಗದ ವಿಶೇಷ ತಂಡ ಬೆಳಗಾವಿಯನ್ನು ತಲುಪಿದೆ.
ಶಿವಮೊಗ್ಗದ ಖ್ಯಾತ ವನ್ಯಜೀವಿ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ಸಕ್ರೆಬೈಲ್ ಆನೆ ಬಿಡಾರದ ಅರ್ಜುನ ಮತ್ತು ಆಲೆ ಆನೆ, ವೈದ್ಯರು, ಸಹಾಯಕ ಸಿಬ್ಬಂದಿಗಳು, ಮಾವುತರು, ಕಾವಾಡಿಗಳ 8 ಜನರ ತಂಡ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಬಿಡು ಬಿಟ್ಟಿದೆ.
ಆಲೆ, ಅರ್ಜುನ ಆನೆಗಳು ಮಧ್ಯರಾತ್ರಿ ಎರಡು ಗಂಟೆಗೆ ಬೆಳಗಾವಿ ತಲುಪಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಆನೆಗಳಿಂದ ಚಿರತೆ ಶೋಧಕಾರ್ಯ ಆರಂಭವಾಗಿದೆ.
ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆಯ ಶೋಧ ಕಾರ್ಯಕ್ಕಾಗಿ ಅಲ್ಗೋರಿಡಮ್ ತಂತ್ರಜ್ಞಾನದ ಡ್ರೋಣ್ ಬಳಸಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ವಿಶೇಷ ತಂಡವು ಕಾರ್ಯಾಚರಣೆಗೆ ಮುಂದಾಗಿದೆ. ಈ ಡ್ರೋಣ್ ಗಾಲ್ಫ್ ಮೈದಾನದ 250 ಎಕರೆ ಪ್ರದೇಶವನ್ನು ಇಡಿಯಾಗಿ ಸ್ಕ್ಯಾನ್ ಮಾಡಲಿದೆ.
ಚಿರತೆಯನ್ನು ಹಿಡಿಯಲು 16 ಸಿಸಿ ಕ್ಯಾಮರಾ, 6 ಬೋನು, 50 ಜನ ಅರಣ್ಯ ಸಿಬ್ಬಂದಿಗಳು ನಿರಂತರವಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನು ಒದಿ : https://cnewstv.in/?p=10948
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಗಾಲ್ಫ್ ಮೈದಾನದಲ್ಲಿ ಅಡಗಿದ ಚಿರತೆ ಶೋಧ ಕಾರ್ಯ ಆರಂಭ. 2022-08-24