Cnewstv.in / 24.08.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶೀಘ್ರವೇ 5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳು ಭರ್ತಿ : ಗೃಹ ಸಚಿವ ಅರಗಜ್ಞಾನೇಂದ್ರ.
ಬೆಂಗಳೂರು : ಶೀಘ್ರವೇ 5 ಸಾವಿರ ಪೊಲೀಸ್ ಸ್ಟೇಷನ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಕೆಜಿಎಫ್ ಪೊಲೀಸ್ ಡಿಎಆರ್ ಬಿಜೆಪಿ ಆಯೋಜಿಸಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆಡಳಿತ ಕಚೇರಿ, ಶಸ್ತ್ರಗಾರ ಮತ್ತು ಶ್ವಾನದಳ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿ ವರ್ಷ ಸಿಬ್ಬಂದಿ ನೇಮಕ ಕಾರ್ಯ ನಡೆದಿದೆ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರ ಅವಶ್ಯಕತೆ ಹೆಚ್ಚಿದೆ, ಪ್ರಸಕ್ತ ಸಾಲಿನಲ್ಲಿಯೂ 5 ಸಾವಿರ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ರಾಜ್ಯದೆಲ್ಲೆಡೆ ಹೊಸ ಪೊಲೀಸ್ ಠಾಣೆಯ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನು ಒದಿ : https://cnewstv.in/?p=10941
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
C News TV Kannada News Online in cnewstv