Cnewstv.in / 23.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜನರ ಜೊತೆ ಕಣ್ಣಮುಚ್ಚಾಲೆ ಆಡುತ್ತಿರುವ ಚಿರತೆ ಕಾರ್ಯಾಚರಣೆಗೆ ಶಿವಮೊಗ್ಗದಿಂದ ವಿಶೇಷ ತಂಡ.
ಶಿವಮೊಗ್ಗ : ಬೆಳಗಾವಿಯಲ್ಲಿ ಕಳೆದ ಕೆಲವು ದಿನಗಳಿಂದ ಜನರಲ್ಲಿ ಆತಂಕವನ್ನು ಹುಟ್ಟಿಸಿದ ಚಿರತೆ ಸೆರೆಹಿಡಿಯಲು ಶಿವಮೊಗ್ಗದಿಂದ ವಿಶೇಷ ತಂಡವನ್ನು ಬೆಳಗಾವಿಗೆ ಕಲುಹಿಸಲಾಗುತ್ತಿದೆ.
ಕಳೆದ 20 ದಿನಗಳಿಂದ ಬೆಳಗಾವಿ ಜನರ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ, ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗಿ ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚಿಸಿತ್ತು.
ಜಾಧವ ನಗರ, ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆ, ಸಾವಿರಾರು ಜನ ವಾಯುವಿಹಾರ ಮಾಡುವ ಗಾಲ್ಪ್ ಮೈದಾನದಲ್ಲಿ ಸಹ ಚಿರತೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
ಚಿರತೆಯನ್ನು ಹಿಡಿಯುವುದಕ್ಕಾಗಿ 16 ಸಿಸಿ ಕ್ಯಾಮರಾ, 6 ಬೋನು, 50 ಜನ ಅರಣ್ಯ ಸಿಬ್ಬಂದಿಗಳು ನಿರಂತರವಾಗಿ ಶೋಧ ಕಾರ್ಯ ನಡೆಸಿದರೂ ಸಹ ಚಿರತೆ ಬಲೆಗೆ ಬೀಳುತ್ತಿಲ್ಲ. ಹಾಗಾಗಿ ಶಿವಮೊಗ್ಗದ ಖ್ಯಾತ ವನ್ಯಜೀವಿ ತಜ್ಞ, ಡಾರ್ಟ್ ಸ್ಪೆಷಲಿಸ್ಟ್ ಡಾ. ವಿನಯ್ ನೇತೃತ್ವದ ತಂಡ ಬೆಳಗಾವಿಗೆ ಹೊರಟಿದೆ.
ಸಕ್ರೆಬೈಲ್ ಆನೆ ಬಿಡಾರ ನೇತ್ರಾ & ಆಲೆ ಕಾರ್ಯಾಚರಣೆಯ ಲೀಡ್ ತೆಗೆದುಕೊಳ್ಳಲಿದೆ. ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅನುಭವ ಇರುವ ಎರಡು ಆನೆಗಳು ಈಗ ಬೆಳಗಾವಿಗೆ ಹೊರಟಿದೆ. ಇದರೊಂದಿಗೆ ವೈದ್ಯರು, ಸಹಾಯಕ ಸಿಬ್ಬಂದಿಗಳು, ಮಾವುತರು, ಕಾವಾಡಿಗಳು ಸೇರಿದಂತೆ 8 ಜನರ ತಂಡ ಬೆಳಗಾವಿಗೆ ಹೊರಟಿದೆ.
C News TV Kannada News Online in cnewstv