ನಿಷೇಧಾಜ್ಞೆ ಮುಂದುವರಿಕೆ…
Cnewstv.in / 20.8.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಿಷೇಧಾಜ್ಞೆ ಮುಂದುವರಿಕೆ…
ಶಿವಮೊಗ್ಗ : ಅಗಸ್ಟ್ 15 ರಂದು 75ನೇ ಸ್ವಾತಂತ್ರೋತ್ಸದ ಅಮೃತಮಹೋತ್ಸವ ಅಂಗವಾಗಿ ಭಾವಚಿತ್ರದ ಪ್ಲೆಕ್ಸ್ ಹಾಕುವ ಸಂಬಂಧ ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಿದ ವೀರ ಸಾವರ್ಕರ್ ಪ್ಲೆಕ್ಸ್ ನ್ನು
ತೆಗೆದ ಹಿನ್ನಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಪ್ರಕೂಬ್ಧ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ಶಿವಮೊಗ್ಗ
ತಾಲ್ಲೂಕಿನಾದ್ಯಂತ ಅಗಸ್ಟ್ 18ರ ರಾತ್ರಿ 10 ಗಂಟೆಯಿಂದ ಅಗಸ್ಟ್ 20 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತು.
ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸೂಕ್ಷ್ಮತೆಯಿಂದ ಕೂಡಿದ್ದು, ಈ ಸಂಬಂಧ ಪರಿಸ್ಥಿತಿಯನ್ನು ಅವಲೋಕಿಸಿ
ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಶಿವಮೊಗ್ಗ ತಾಲ್ಲೂಕಿನಾದ್ಯಂತ ಸಿ.ಆರ್.ಪಿ.ಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ಅಗಸ್ಟ್ 20 ರ ಬೆಳಿಗ್ಗೆ 6 ಗಂಟೆಯಿಂದ ಅಗಸ್ಟ್ 23 ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.
ನಿಬಂಧನೆಗಳು..
* 5 ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.
* ಯಾವುದೇ ಮೆರವಣಿಗೆ ಸಭೆ, ಸಮಾರಂಭಗಳು, ವಿಜಯೋತ್ಸವ ಹಾಗೂ ಸಾರ್ವಜನಿಕ ಪ್ರತಿಭಟನಾ
ಮೆರವಣಿಗೆ, ಜಾಥಾ, ಧರಣಿ, ಮುಷ್ಕರ, ರಸ್ತೆ ರೋಕೋ, ಸಾರ್ವಜನಿಕ / ರಾಜಕೀಯ ಸಭೆ, ಸಮಾರಂಭಗಳನ್ನು
ನಡೆಸುವಂತಿಲ್ಲ.
* ಶಸ್ತ್ರಗಳು, ದೊಣ್ಣೆಗಳು, ಕತ್ತಿಗಳು, ಈಟಿಗಳು, ಗದೆಗಳು, ಕಲ್ಲು, ಇಟ್ಟಿಗೆ, ಚಾಕು, ಕೋಲುಗಳು, ಬಂದೂಕುಗಳು,
ಲಾಠಿಗಳು ಅಥವಾ ಮಾರಕಾಸ್ತ್ರಗಳನ್ನು ಅಥವಾ ದೈಹಿಕ ಹಿಂಸೆಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು
ಒಯ್ಯುವುದನ್ನು /ಶೇಖರಿಸುವುದನ್ನು ನಿಷೇಧಿಸಿದೆ.
* ಯಾವುದೇ ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಕಲ್ಲುಗಳನ್ನು, ಕ್ಷಿಪಣಿಗಳನ್ನು ಎಸೆಯುವ ಸಾಧನಗಳ ಅಥವಾ
ಉಪಕರಣಗಳ ಒಯ್ಯುವಿಕೆಯನ್ನು ಮತ್ತು ಶೇಖರಿಸುವುದನ್ನು ನಿಷೇಧಿಸಿದೆ.
* ಈ ನಿಷೇದಾಜ್ಞೆಯ ಅವಧಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ನಿಷೇಧಿಸಿದೆ.
* ಎಲ್ಲಾ ವ್ಯಾಪಾರದ ಅಂಗಡಿಗಳನ್ನು ರಾತ್ರಿ 10 ಗಂಟೆಯೊಳಗಾಗಿ ಮುಚ್ಚತಕ್ಕದ್ದು.
* ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ರಾತ್ರಿ- 10:00 ಗಂಟೆ ನಂತರ ಪ್ರದರ್ಶನಗಳನ್ನು ನಿಷೇಧಿಸಿದೆ.
ಇದನ್ನು ಒದಿ : https://cnewstv.in/?p=10914
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಿಷೇಧಾಜ್ಞೆ ಮುಂದುವರಿಕೆ... 2022-08-20