Breaking News

5 ವರ್ಷದ ಮಕ್ಕಳಿಗೆ ರೈಲಿನಲ್ಲಿ ಪೂರ್ಣ ಟಿಕೆಟ್ ಬೇಕಾ, ಬೇಡ ? ಗೊಂದಲಕ್ಕೆ ತೆರೆ ಎಳೆದ ರೈಲ್ವೆ ಇಲಾಖೆ.

Cnewstv.in / 18.08.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

5 ವರ್ಷದ ಮಕ್ಕಳಿಗೆ ರೈಲಿನಲ್ಲಿ ಪೂರ್ಣ ಟಿಕೆಟ್ ಬೇಕಾ, ಬೇಡ ? ಗೊಂದಲಕ್ಕೆ ತೆರೆ ಎಳೆದ ರೈಲ್ವೆ ಇಲಾಖೆ.

ನವದೆಹಲಿ : ಮಕ್ಕಳಿಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬುಕಿಂಗ್ ನಲ್ಲಿ ಇಲಾಖೆಯು ಕೆಲವು ಬದಲಾವಣೆಗಳನ್ನು ಮಾಡಿದೆ. 1 ರಿಂದ 4 ವರ್ಷದ ಮಕ್ಕಳಿಗೂ ರೈಲು ಟಿಕೆಟ್ ಖರೀದಿಸುವುದು ಕಡ್ಡಾಯ ಎಂದು ವರದಿಗಳು ಬಂದಿವೆ. ಇದಾದ ಬಳಿಕ ಪ್ರಯಾಣಿಕರಿಗೆ ತಮ್ಮ ಮಕ್ಕಳಿಗೆ ಟಿಕೆಟ್ ಬುಕಿಂಗ್ ಮಾಡಬೇಕೇ? ಬೇಡವೇ? ಎಂಬ ಗೊಂದಲ ಉಂಟಾಗಿತ್ತು. ಆ ಗೊಂದಲಕ್ಕೆ ಇಲಾಖೆ ತೆರೆ ಎಳೆದಿದೆ.

4 ವರ್ಷದ ಮಕ್ಕಳಿಗೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬೇಕು ಎಂಬ ಮಾಧ್ಯಮ ವರದಿಗಳನ್ನು ರೈಲ್ವೇ ಸಚಿವಾಲಯ ನಿರಾಕರಿಸಿದೆ. “ಭಾರತೀಯ ರೈಲ್ವೇಯು ಮಕ್ಕಳಿಗಾಗಿ ಟಿಕೆಟ್ ಕಾಯ್ದಿರಿಸುವಿಕೆಗೆ ಯಾವುದೇ ಬದಲಾವಣೆಗಳನ್ನು ಪರಿಚಯಿಸಲಾಗಿಲ್ಲ ” ಎಂದು ಸಚಿವಾಲಯ ತಿಳಿಸಿದೆ.

ಹಿಂದೆ ಇದ್ದಂತೆಯೇ ಪ್ರಯಾಣಿಕರು ಪ್ರತ್ಯೇಕ ಬರ್ತ್ ಬಯಸದಿದ್ದರೆ ಐದು ವರ್ಷದ ಮಕ್ಕಳಿಗೆ ಟಿಕೆಟ್ ಖರೀದಿಸುವ ಅಗತ್ಯವಿಲ್ಲ.

2020ರ ಮಾರ್ಚ್ 6 ರಂದು ಹೊರಡಿಸಿದ ಸುತ್ತೋಲೆ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರಯಾಣಿಸಲು ಟಿಕೆಟ್ ರಿಸರ್ವೇಷನ್ ಅಗತ್ಯವಿಲ್ಲ. 5 ವರ್ಷದ ಮಕ್ಕಳಿಗೆ ಉಚಿತವಾಗಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಬಹುದು. ಆದರೂ, ಒಂದೊಮ್ಮೆ ಮಕ್ಕಳಿಗೆ ಬರ್ತ್ ಅರ್ಜಿ ಟಿಕೆಟ್ ಬುಕ್ ಮಾಡುವ ಮೂಲಕ ಪೂರ್ಣ ಟಿಕೆಟ್ ಶುಲ್ಕವನ್ನು ಪಾವತಿಸಲಾಯಿತು..

ಇದನ್ನು ಒದಿ : https://cnewstv.in/?p=10903

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*