Breaking News

ಶಿವಮೊಗ್ಗ ನಗರದಲ್ಲಿ ನಿಷೇದಾಜ್ಞೆ… ಈ ನಿಭಂದನೆಗಳನ್ನು ಮರೆಯದಿರಿ.

Cnewstv.in / 16.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಶಿವಮೊಗ್ಗ ನಗರದಲ್ಲಿ ನಿಷೇದಾಜ್ಞೆ… ಈ ನಿಭಂದನೆಗಳನ್ನು ಮರೆಯದಿರಿ.

ಶಿವಮೊಗ್ಗ : ನೆನ್ನೆ ನಗರದಲ್ಲಿ ವೀರಸಾವರ್ಕರ್‌ ಫೊಟೋ ಅಳವಡಿಸುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ದಿನಾಂಕಃ- 15-08-2022 ರ ಮದ್ಯಾಹ್ನ 03-00 ಗಂಟೆಯಿಂದ ದಿನಾಂಕಃ- 18-08-2022 ರಂದು ರಾತ್ರಿ 10:00 ಗಂಟೆಯ ವರೆಗೆ ಈ ಕೆಳಕಂಡ ನಿಭಂದನೆಗಳನ್ನು ವಿಧಿಸಿ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿರುತ್ತದೆ.

ಈ ನಿಭಂದನೆಗಳನ್ನು ತಪ್ಪದೆ ಪಾಲಿಸಿ..

* 05 ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ನಿರ್ಭಂದಿಸಿದೆ.

* ಯಾವುದೇ ಮೆರವಣಿಗೆ, ಸಭೆ, ಸಮಾರಂಬ ಮತ್ತು ವಿಜಯೋತ್ಸವ ಹಾಗೂ ಇತರೆ ಸಾರ್ವಜನಿಕ ಸಮಾವೇಶಗಳನ್ನು ನಿಷೇದಿಸಲಾಗಿದೆ.

* ಯಾವುದೇ ರೀತಿ ಆಯುಧ ಹಾಗೂ ಮಾರಕಾಸ್ತ್ರಗಳನ್ನು ಹಾಗೂ ಸ್ಪೋಟಕ ಗಳನ್ನು ತೆಗೆದುಕೊಂಡು ಹೋಗುವುದು ಮತ್ತು ಸಂಗ್ರಹಿಸುವುದು ನಿಷೇದಿಸಲಾಗಿದೆ.

* ವ್ಯಕ್ತಿ / ಶವಗಳ ಪ್ರತಿಕೃತಿಗಳನ್ನು ಪ್ರದರ್ಶನ / ದಹನ ಮಾಡುವುದು ಮತ್ತು ಪ್ರಚೋದನಕಾರಿ ಘೋಷಣೆ ಹಾಗೂ ಭಿತ್ತಿಚಿತ್ರಗಳನ್ನು ತೋರಿಸುವುದು ನಿಷೇದಿಸಲಾಗಿದೆ.

* ದ್ವಿ ಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನ ಗಂಡಸರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇದಿಸಲಾಗಿದೆ. (40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರನ್ನು ಹೊರತು ಪಡಿಸಿ)

* ರಾತ್ರಿ 09:00 ರಿಂದ ಬೆಳಗಿನ ಜಾವ 05:00 ರವೆಗೆ ದ್ವಿ ಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. (ತುರ್ತು ಸಂದರ್ಭವನ್ನು ಹೊರತು ಪಡಿಸಿ)

ಇದನ್ನು ಒದಿ : https://cnewstv.in/?p=10857

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*