Breaking News

ನ್ಯಾಯಾಲಯದ ಆವರಣದಲ್ಲಿ ಹೆಂಡತಿ ಕತ್ತು ಸೀಳಿ ಹತ್ಯೆಮಾಡಿದ ಪತಿರಾಯ..

Cnewstv.in / 14.08.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ನ್ಯಾಯಾಲಯದ ಆವರಣದಲ್ಲಿ ಹೆಂಡತಿ ಕತ್ತು ಸೀಳಿ ಹತ್ಯೆಮಾಡಿದ ಪತಿರಾಯ..

ಬೆಂಗಳೂರು : ನ್ಯಾಯಾಲಯದ ಆವರಣದಲ್ಲಿ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಚೈತ್ರ (28) ಮತ್ತು ಶಿವಕುಮಾರ್ (32) ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೀವನವನ್ನು ಕೋರಿ ಚೈತ್ರ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು ಇದರಿಂದ ಕೋಪಗೊಂಡ ಶಿವಕುಮಾರ್ ಹೊಂಚುಹಾಕಿ ನ್ಯಾಯಲಯದ ಆವರಣದಲ್ಲಿ ಹತ್ಯೆ ಮಾಡಿದ್ದಾನೆ.

ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯಕ್ಕೆ ಚೈತ್ರ ಹೋಗಿ ಬರುವ ಸಂದರ್ಭದಲ್ಲಿ ಶಿವಕುಮಾರ ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾನೆ ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯದಲ್ಲೇ ಚೈತ್ರ ಕೊನೆಯುಸಿರೆಳೆದಿದ್ದಾಳೆ.

ಶಿವಕುಮಾರ್ ನನ್ನು‌ ಪೋಲಿಸರು ವಶಕ್ಕೆ ಪಡೆದಿದ್ದು, ಮುಂದಿನ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಅವರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನು ಒದಿ : https://cnewstv.in/?p=10820

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*