Breaking News

75 ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ JCI ಮಲ್ನಾಡ್ ನಿಂದ ವಿನೂತನ ಕಾರ್ಯಕ್ರಮ.

Cnewstv.in / 12.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

75 ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ JCI ಮಲ್ನಾಡ್ ನಿಂದ ವಿನೂತನ ಕಾರ್ಯಕ್ರಮ.

ಶಿವಮೊಗ್ಗ : 75ನೇ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ JCI ಮಲ್ನಾಡ್ ವತಿಯಿಂದ ಒಂದು ಸಾವಿರ ಅಡಿ ತ್ರಿವರ್ಣ ಧ್ವಜದ ಜಾಥಾ ಆಯೋಜಿಸಲಾಗಿದೆ.

ಜೂನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಒಂದು ಅಂತರ ರಾಷ್ಟ್ರೀಯ ಸಂಸ್ಥೆಯಾಗಿದ್ದು ಅದರ ಅಂಗವಾದ ಜೆಸಿಐ ಶಿವಮೊಗ್ಗ ಮಲ್ನಾಡ್ ಕಳೆದ 36 ವರ್ಷಗಳಿಂದ ಶಿವಮೊಗ್ಗದಲ್ಲಿ
ಅನೇಕ ತರಬೇತಿ ಕಾರ್ಯಕ್ರಮಗಳನ್ನು, ಜನಪರ ಕಾರ್ಯಕ್ರಮಗಳನ್ನು ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.

ಆಗಸ್ಟ್ 15ರ ಬೆಳಗ್ಗೆ 10 ಗಂಟೆಗೆ ನಗರದ ಸಿಮ್ಸ್ ಕಾಲೇಜು
ಆರಂಭವಾಗಲಿದ್ದು, ಬಿ.ಹೆಚ್. ರಸ್ತೆ, ನೆಹರು ರಸ್ತೆ , ಗೋಪಿ ವೃತ್ತ, ಮಹಾವೀರ ವೃತ್ತದ ಮೂಲಕ ಕುವೆಂಪು ರಂಗಮಂದಿರ ಹಿಂಭಾಗಕ್ಕೆ ತಲುಪಲಿದೆ.

ಈ ಜಾಥಾದಲ್ಲಿ ನಗರದ ವಿವಿಧ ಶಾಲೆಗಳ 800ಕ್ಕೂ ಹೆಚ್ಚು ಮಕ್ಕಳು ಸೌಟ್ಸ್ ಅಂಡ್ ಗೈಡ್ ಹಾಗೂ ರೋಡ್ ಥಿಲ್ ಬೈಕ್ ಸಮೂಹ ಭಾಗಿಯಾಗುವರು. ವಿವಿಧ ಸಂಘ ಸಂಸ್ಥೆಗಳು
ಜಾಥಾಕ್ಕೆ ಸಹಕಾರ ನೀಡುತ್ತಿದ್ದಾರೆ.

ವೇದಿಕೆಯಲ್ಲಿ ಜೆಸಿ ಶ್ರೀನಾಗ್, ಸಂಚಾಲಕರು, ಜೆಸಿ ಗಿರೀಶ್ ಕೆ.ಕೆ, ಸಹಸಂಚಾಲಕರು, ಜೆಸಿ ಪ್ರದೀಪ್ ಎಸ್. ಅಧ್ಯಕ್ಷರು, ಜೆಸಿಐ ಶಿವಮೊಗ್ಗ ಮಲ್ನಾಡ್, ಜೆಸಿ ಕಿರಣ್ ಎನ್.ಪಿ ಹಾಗೂ ಜೆಸಿ ರಾಕೇಶ್ ಉಪಸ್ಥಿತರಿದ್ದರು.

ಇದನ್ನು ಒದಿ : https://cnewstv.in/?p=10797

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*