ಜಡಿ ಮಳೆಯ ನಡುವೆಯೂ ಮತಕ್ಷೇತ್ರದಲ್ಲಿ ಅಭಿವೃದ್ದಿ ಯೋಜನೆ ಲೋಕಾರ್ಪಣೆ ಗೊಳಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
Cnewstv.in / 10.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಜಡಿ ಮಳೆಯ ನಡುವೆಯೂ ಮತಕ್ಷೇತ್ರದಲ್ಲಿ ಅಭಿವೃದ್ದಿ ಯೋಜನೆ ಲೋಕಾರ್ಪಣೆ ಗೊಳಿಸಿದ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಶಿವಮೊಗ್ಗ : ಮತಕ್ಷೇತ್ರ ತೀರ್ಥಹಳ್ಳಿಯ ನೆರಟುರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ, ಬಹಳ ದಿನಗಳ ಬೇಡಿಕೆಯಾದ ಮೊಬೈಲ್ ಟವರ್ ಅನ್ನು, ಮಂಜೂರು ಮಾಡಿಸಿ, ಇಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರರವರು, ಲೋಕಾರ್ಪಣೆ ಗೊಳಿಸಿದರು.
ಟವರ್ ಇಲ್ಲದ ಕಾರಣ ಸುಮಾರು ಏಳರಿಂದ ಎಂಟು ಕಿಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನತೆ ಎದುರಿಸುತ್ತಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಪರಿಹಾರವಾಗಿದ್ದು, ಸಮಸ್ಯೆಗೆ ಪರಿಹಾರ ಒದಗಿಸಿದ ಸಚಿವರಿಗೆ, ಗ್ರಾಮಸ್ಥರು, ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ದೂರವಾಣಿ ಯ ಮೂಲಭೂತ ಸೌಕರ್ಯವನ್ನು ಒದಗಿಸುವುದರ ಮೂಲಕ, ಈ ಭಾಗದ ಜನತೆಗೆ ಅತ್ಯಗತ್ಯ ವಾದ ಸೌಲಭ್ಯ ದೊರಕಿದೆ ಹಾಗೂ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ಸಚಿವರು ತಿಳಿಸಿದರು.
ಕಳೆದ ನಾಲ್ಕು ವರ್ಷದಲ್ಲಿ, ನೆರಟುರು ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು 6.8 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಮಂಜೂರಾಗಿದ್ದು, ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ಈ ಮೂಲಕ ಗ್ರಾಮಸ್ಥರು ನಮ್ಮ ಮೇಲೆ ಇರಿಸಿದ ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಹಾಗೂ ಅದನ್ನು ತೀರಿಸಲು ಕತಿಬದ್ದನಾಗಿದ್ದೇನೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಜಿಗಳಗೊಡು ಗ್ರಾಮದಲ್ಲಿ ಕುಡಿಯುವ ನೀರು ಪೂರೈಸುವ ಬೋರ್ವೆಲ್ ಅನ್ನೂ, ಇದೇ ಸಂದರ್ಭದಲ್ಲಿ, ಸೇವೆಗೆ ಅರ್ಪಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ಸತೀಶ್, ಟಿಎಪಿಎಂಸಿ ಅಧ್ಯಕ್ಷ ಶ್ರೀ ನಾಗರಾಜ ಶೆಟ್ಟಿ, ಬಿಜೆಪಿ ನಾಯಕ ಶ್ರೀ ಸಿಬಿ ಈಶ್ವರ್ ಒಳಗೊಂಡಂತೆ ಇತರ ಗಣ್ಯರೂ ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=10777
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
2022-08-10