Cnewstv.in / 08.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮಳೆಯನ್ನೂ ಲೆಕ್ಕಿಸದೆ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ.
ಶಿವಮೊಗ್ಗ : ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ಮಳೆಯನ್ನು ಲೆಕ್ಕಿಸದೆ ಶಿವಪ್ಪ ನಾಯಕ ವೃತ್ತದಲ್ಲಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ಜನ ವಿರೋಧಿ ಭ್ರಷ್ಟ ಬಿಜೆಪಿ ಸರ್ಕಾರ ದಿನನಿತ್ಯ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಾ , ದೇಶದ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿ ಶ್ರೀಸಾಮಾನ್ಯನ ಮೇಲೆ ದಿನನಿತ್ಯ ಬರೆಯಾಕುತ್ತಾ ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುವಾದ ಎಂಬ ನಷೆಯನ್ನು ಬಿತ್ತುತಿರುವ “ಬಿಜೆಪಿಗರೇ ಸರ್ಕಾರ ಬಿಟ್ಟು ತೊಲಗಿ” ಎಂಬ ಘೋಷಣೆಗಳನ್ನು ಕೂಗಲಾಯಿತು.
ಅಡಿಗೆ ಅನಿಲದ ಬೆಲೆ ಈಗಾಗಲೇ ಸಾವಿರ ರೂ ಗಡಿಯನ್ನು ದಾಟಿದ್ದು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ಪರಿಸ್ಥಿತಿಯನ್ನು 164 ನೇ ಸ್ಥಾನಕ್ಕೆ ತಂದು ನಿಲ್ಲಿಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಶ್ರೀಸಾಮಾನ್ಯ ಸಂಕಷ್ಟಪಡುವ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೇ ಹೇಳಿದಂತಾಗಿದೆ ಹಲವು ಬಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು ಸಹ ಯಾವುದೇ ಆರ್ಥಿಕ ವ್ಯವಸ್ಥೆಯನ್ನು ಹತೋಟಿಗೆ ತರವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ವಿಫಲವಾಗಿ 40% ಕಮಿಷನ್ ಲೂಟಿ ಹೊಡೆಯುತ್ತಾ ಸರ್ಕಾರಿ ಸೌಮ್ಯದ ಸಂಸ್ಥೆಗಳನೆಲ್ಲ ಖಾಸಗಿಕರಣ ಮಾಡುತ್ತಾ , ರೈತ, ಶ್ರೀಸಾಮಾನ್ಯನಿಗೆ ಜನವಿರೋಧಿ ಆಡಳಿತ ನಡೆಯುತ್ತಿರುವ ಭ್ರಷ್ಟ ಕೇಂದ್ರ ಬಿಜೆಪಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸುಳ್ಳು ಹೇಳಿ ಈಗಾಗಲೇ ಕಳೆದ ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ಎಲ್ಲಿ ಎಂಬುದು ಯುವಕರ ಯಕ್ಷಪ್ರಶ್ನೆಯಾಗಿದೆ, ಯುವಕರಿಗೆ ಉದ್ಯೋಗ ಕೊಡುವ ಬದಲು “ಕೋಮುವಾದವೆಂಬ ನಶೆಯನ್ನು ತುಂಬುತ್ತಿರುವುದು ತೀವ್ರ ಖಂಡನೆ, ಈ ಕೂಡಲೇ ರಾಷ್ಟ್ರಪತಿಗಳು ಈ ಜನ ವಿರೋಧಿ ದಿವಾಳಿತನದ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.